Top

ಪಟಾಕಿ ಪ್ರಿಯರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್‌..! ಕೇವಲ 2 ಗಂಟೆ ಪಟಾಕಿ ಸಿಡಿಸಲು ಪರ್ಮಿಷನ್.!

ಪಟಾಕಿ ಪ್ರಿಯರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್‌..! ಕೇವಲ 2 ಗಂಟೆ ಪಟಾಕಿ ಸಿಡಿಸಲು ಪರ್ಮಿಷನ್.!
X

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೇವಲ 1 ದಿನ ಬಾಕಿ ಇದೆ. ಯುವಕರಂತೂ ಈ ಬಾರಿ ತರ, ತರಹದ ಪಟಾಕಿಗಳನ್ನು ಸುಡಲು ಫುಲ್ ಕಾತುರರಾಗಿದ್ದಾರೆ. ಆದರೆ ಪಟಾಕಿ ಪ್ರಿಯರಿಗೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ನೀಡಿದೆ.

ಈ ಬಾರಿ ನಗರದಲ್ಲಿ ಪಟಾಕಿ ಸಿಡಿಸಲು, ಕೆಲವೊಂದು ಕಟ್ಟು ನಿಟ್ಟಿನ ನಿಮಯಗಳನ್ನು ವಾಯುಮಾಲಿನ್ಯ ಜಾರಿಗೊಳಿಸಿದೆ. ರಾತ್ರಿ 8 ರಿಂದ 10 ಗಂಟೆವರೆಗೆ ಕೇವಲ 2 ಗಂಟೆಗಳ ಕಾಲ ಪಟಾಕಿ ಸುಡಲು ಮಾತ್ರ ಅವಕಾಶ ನೀಡಿದೆ. ಅಷ್ಟೇ ಅಲ್ಲದೇ ಹಚ್ಚಿನ ಸೌಂಡ್‌ ಇರುವ ಪಟಾಕಿಗಳನ್ನು ಸಿಡಿಸುವಂತಿಲ್ಲ. ಒಂದು ವೇಳೆ ಅಂತಹ ಕ್ರ್ಯಾಕರ್ಸ್‌ಗಳನ್ನು ಸಿಡಿಸಿದರೆ, ಕೂಡಲೇ ಅಂಥವರನ್ನು ಪೊಲೀಸರು ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ವಾಯುಮಾಲಿನ್ಯ ಸೂಚಿಸಿದ್ದಾರೆ.

ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ರೂಲ್ಸ್‌. ಕೇವಲ ಪಟಾಕಿ ಪ್ರಿಯರಿಗಷ್ಟೇ ಅಲ್ಲ, ಪಟಾಕಿ ಮಾರಾಟಗಾರರಿಗೂ ಶಾಕ್‌ ನೀಡಿದೆ. ಕಳೆದ ವರ್ಷಗಳಲ್ಲಿ ಹಬ್ಬಕ್ಕೆ ಒಂದು ವಾರ ಇರುವಾಗಲೇ ಪಟಾಕಿಗಳು ಶೇ 50% ರಷ್ಟು ಮಾರಾಟವಾಗುತ್ತಿದ್ದವು. ಆದರೆ ಈಗ ಹಬ್ಬಕ್ಕೆ ಒಂದೇ ದಿನ ಬಾಕಿ ಇದ್ದರೂ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ ಎಂದು ಪಟಾಕಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಪಿ.ಸಿ.ಬಿ ಪಟಾಕಿ ಪ್ರಿಯರಿಗೆ ಶಾಕ್​ ನೀಡಿದರೆ. ಇನ್ನೊಂದೆಡೆ ಗ್ರಾಹಕರು, ಪರಿಸರ ಸ್ನೇಹಿ ದೀಪಾವಳಿ ಎಂದು ಪಟಾಕಿ ವ್ಯಾಪಾರಿಗಳಿಗೆ ಶಾಕ್​ ನೀಡಿದ್ದಾರೆ.

ಪ್ರಿಯಾಂಕ ತಳವಾರ,ಟಿವಿ5, ಬೆಂಗಳೂರು.

Next Story

RELATED STORIES