Top

ಬಿಜೆಪಿ ಕೈ ಹಿಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ..!

ಬಿಜೆಪಿ ಕೈ ಹಿಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ..!
X

ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಮುಂದಿನ ಐದು ವರ್ಷಗಳಲ್ಲಿ ಎರಡು ರಾಜ್ಯಗಳು ಹೊಸ ಮಾದರಿಯ ಅಭಿವೃದ್ಧಿ ಸಾಕ್ಷಿಯಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ.

ದೆಹಲಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಮರು ಆಯ್ಕೆಯಾಗಲಿದ್ದಾರೆ ಎಂದು ಅವರು ಘೋಷಣೆ ಮಾಡಿದ್ದಾರೆ.

ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಕೈ ಹಿಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದ ಅವರು, ಸಹಜವಾಗಿ ಒಂದೇ ಪಕ್ಷ ಮತ್ತೆ ಅಧಿಕಾರದ ಹಿಡಿಯುವುದು ಸುಲಭದ ಮಾತಲ್ಲ. ಎರಡು ರಾಜ್ಯದ ಮತದಾರರು ಅದನ್ನು ಸುಳ್ಳಾಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ ಮಹಾರಾಷ್ಟ, ಹರಿಯಾಣದ ಜನರು ಎನ್‌ಡಿಎಗೆ ಅಪಾರ ಪ್ರೀತಿಯಿಂದ ಆಶೀರ್ವದಿಸಿದ್ದಾರೆ. ಜನರ ಈ ಬೆಂಬಲಕ್ಕೆ ಸದಾ ನಾವು ಚಿರಋಣಿಯಾಗಿದ್ದೇವೆ ಎಂದ ಅವರು, ಎರಡು ರಾಜ್ಯಗಳಲ್ಲಿ ಈಗಾಗಲೇ ಪ್ರಗತಿಯತ್ತ ಕೆಲಸ ಮುಂದುವರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಿದ್ದಾರೆ.

Next Story

RELATED STORIES