'ಜೆಡಿಎಸ್' ಅಪ್ಪ, ಮಕ್ಕಳ ಪಕ್ಷ - ರೇಣುಕಾಚಾರ್ಯ

ದಾವಣಗೆರೆ: ದುಷ್ಟರಿಗೆ ಪ್ರಶಸ್ತಿ ಕೊಟ್ಟರೆ ಟೀಕೆ ಮಾಡಿ. ಅಪ್ರತಿಮ ದೇಶ ಭಕ್ತನ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾವಾರ್ಯ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಗಾಂಧಿ ಹತ್ಯೆಯಲ್ಲಿ ಭಾಗಿಯಾದ ಸಾವರ್ಕರ್ ಅವರಿಗೆ ಬಿಜೆಪಿ ಭಾರತ ರತ್ನ ಕೊಡುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರು ಅವರ ಬಗ್ಗೆ ನನಗೆ ಗೌರವ ಇದೆ. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಮೂಲೆ ಗುಂಪಾಗುತ್ತಿದ್ದರು. ಈಗ ವಿರೋಧ ಪಕ್ಷ ಸಿಕ್ಕಿದೆ. ಹೀಗಾಗಿ ಸಾವರ್ಕರ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹೇಳಿಕೆಯನ್ನು ನಾನು ಕಠೋರವಾಗಿ ಖಂಡಿಸುತ್ತೇನೆ ಎಂದರು.
ಸಾವರ್ಕರ್ ವಿಷಯದಲ್ಲಿ ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಗಾಂಧೀಜಿಯವರ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು ಗಾಂಧೀಜಿ ನಮಗೆ ಆದರ್ಶ ವ್ಯಕ್ತಿ. ಓಟಿಗಾಗೀ ರಾಜಕಾರಣ ಮಾಡಬಾರದು. ಮತಾಂದ ಟಿಪ್ಪು, ದೇಶ ದ್ರೋಹಿ ಅವರ ಜಯಂತಿ ಮಾಡಿದ್ದೀರಿ ಎಂದು ಅವರು ಕಿಡಿಕಾರಿದ್ದಾರೆ.
ಅಲ್ಲದೇ ಯಡಿಯೂರಪ್ಪ ಅವರು ಪಕ್ಷಾತೀತ ನಾಯಕ ಅವರು ಸೈಡ್ ಲೈನ್ ಆಗಲು ಸಾಧ್ಯವಿಲ್ಲ. ಅಮಿತ್ ಷಾ, ನರೇಂದ್ರ ಮೋದಿ ರಾಜ್ಯದಲ್ಲಿ ಯಡಿಯೂರಪ್ಪ ಅವರು ಇದ್ದರೇ ಅಧಿಕಾರಕ್ಕೆ ಬರುತ್ತೆ ಎಂದು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಸಿಎಂ ಮಾಡಿದ್ದಾರೆ. ಶಾಸಕರು, ಸಂಸದರು, ಕಾರ್ಯಕರ್ತರು ಎಲ್ಲಾ ಒಟ್ಟಿಗೆ ಇದ್ದೇವೆ. ಯಾವುದೆ ಕಾರಣಕ್ಕೂ ಯಡಿಯೂರಪ್ಪ ಅವರು ಸೈಡ್ ಲೈನ್ ಆಗೋದಿಲ್ಲ ಎಂದರು.
ದೇಶದಲ್ಲಿ ಮೋದಿ ಹೇಗೊ ರಾಜ್ಯದಲ್ಲಿ ಯಡಿಯೂರಪ್ಪ ಅವರು ಹಾಗೆ, ವಿಶ್ವನಾಥ್ ಬಗ್ಗೆ ಸಾರಾ ಮಹೇಶ್ ಲಘು ಹೇಳಿಕೆ ನೀಡುವುದು ಸರಿಯಲ್ಲ. ವಿಶ್ವನಾಥ್ ಹಿರಿಯ ರಾಜಕಾರಣಿ ಆಣೆ ಪ್ರಮಾಣಕ್ಕೆ ಕರಿಯುವುದು ಅಷ್ಟು ಸಮಂಜಸ ಅಲ್ಲ. ಜೆಡಿಎಸ್ ಅಪ್ಪ, ಮಕ್ಕಳ ಪಕ್ಷ ಇನ್ನು ಆ ಪಕ್ಷದಿಂದ ಎಷ್ಟು ಜನ ಹೊರಗೆ ಹೋಗ್ತಾರೆ ನೋಡಿ ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ.