Top

ಈರುಳ್ಳಿ ಕೊಳ್ಳುವವರಿಗೆ ಗುಡ್​​ ನ್ಯೂಸ್​..!

ಈರುಳ್ಳಿ ಕೊಳ್ಳುವವರಿಗೆ ಗುಡ್​​ ನ್ಯೂಸ್​..!
X

ಬೆಂಗಳೂರು: ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಇಷ್ಟು ದಿನ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಿಂದ ಗ್ರಾಹಕರ ಜೋಬಿಗೆ ಕತ್ತರಿ ಬಿದ್ದಿದ್ರೆ, ಈಗ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿ ಕಂಗೆಟ್ಟಿದ್ದ ರೈತರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರವಾಹಕ್ಕೆ ಕೊಚ್ಚಿ ಹೋಗಿ ಅಳಿದುಳಿದಿದ್ದ ಈರುಳ್ಳಿಯನ್ನು ರೈತರು ಕಾಪಾಡಿಕೊಂಡಿದ್ದರು. ಆದರೆ ದಿಡೀರ್ ಅಂತಾ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

ಇಷ್ಟು ದಿನ ಈರುಳ್ಳಿ ಬೆಲೆ ಗಗನಕ್ಕೇರಿತ್ತು, ಎಪಿಎಂಸಿಯಲ್ಲಿ ಕ್ವಿಂಟಾಲಿಗೆ 5 ಸಾವಿರಕ್ಕು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ರೆ, ಮಾರುಕಟ್ಟೆಯಲ್ಲಿ 8 ಸಾವಿರದವರೆಗು ಮಾರಾಟವಾಗಿತ್ತು. ಆದರೆ, ಈಗ ಎಪಿಎಂಸಿಯಲ್ಲಿ ಕ್ವಿಂಟಾಲಿಗೆ 700 ರೂಪಾಯಿಗೆ ಇಳಿದಿರುವುದು ಈರುಳ್ಳಿ ಬೆಳೆಗಾರರನ್ನು ದಿಕ್ಕುತೋಚದಂತೆ ಮಾಡಿದೆ.

ಹೊರ ದೇಶದಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧ ಮಾಡುತ್ತಿದ್ದಂತೆ, ಈರುಳ್ಳಿ ದರದಲ್ಲಿ ಕುಸಿತ ಕಂಡು ಬಂದಿದೆ. 700 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಮಾರಾಟ ಮಾಡುವ ಸ್ಥೀತಿ ನಿರ್ಮಾಣವಾಗಿರುವುದಕ್ಕೆ ಆಕ್ರೋಶಗೊಂಡಿರುವ ರೈತರು, ತಮ್ಮ ಹೊಲದಲ್ಲಿ ಈರುಳ್ಳಿಯನ್ನು ಹಾಗೆ ಬಿಟ್ಟಿದ್ದಾರೆ.

ಮದ್ಯವರ್ತಿಗಳ ಹಾವಳಿಯು ಹೆಚ್ಚಾಗಿದ್ದು, ರೈತರಿಂದ ಕಡಿಮೆ ಬೆಲೆಗೆ ಈರುಳ್ಳಿ ಖರೀದಿ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರು ಕ್ವಿಂಟಾಲಿಗೆ 4 ರಿಂದ 4500 ರೂಪಾಯಿ ಕೊಟ್ಟು ಖರೀದಿ ಮಾಡುವುದು ಮಾತ್ರ ತಪ್ಪುತ್ತಿಲ್ಲ. ಇನ್ನೊಂದೆಡೆ ಈರುಳ್ಳಿ ಬೆಳೆದ ರೈತರು , ಈರುಳ್ಳಿಗೆ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ.

Next Story

RELATED STORIES