Top

ಹೆಲ್ಮೆಟ್ ಇಲ್ಲ ಅಂದ್ರೆ ಇನ್ಮುಂದೆ ಪೆಟ್ರೋಲ್ ಇಲ್ಲ..!

ಹೆಲ್ಮೆಟ್ ಇಲ್ಲ ಅಂದ್ರೆ ಇನ್ಮುಂದೆ ಪೆಟ್ರೋಲ್ ಇಲ್ಲ..!
X

ಗದಗ: ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಅಲ್ಲಿನ ಪೆಟ್ರೋಲ್ ಡಿಸೇಲ್ ಡಿಲರ್ಸ್ ಅಸೋಸಿಯೇಷನ್ ಕೈ ಜೋಡಿಸಿದ ಪರಿಣಾಮ ಹೆಲ್ಮೆಟ್ ಕಡ್ಡಾಯವಾಗ್ತಿದೆ.

ಗದಗ ಜಿಲ್ಲೆಯ ಜನರಿಗೆ ಟ್ರಾಫಿಕ್ ರೂಲ್ಸ್ ಗಳ ಪಾಠವನ್ನು ಅಲ್ಲಿನ ಪೊಲೀಸರು ಮಾಡ್ತಾನೆ ಬಂದಿದ್ದಾರೆ. ಅದರಲ್ಲೂ ಕೂಡಾ ಹೆಲ್ಮೆಟ್ ಕಡ್ಡಾಯ ವಿಚಾರವಾಗಿ ಈ ಹಿಂದಿನ ಎಸ್ಪಿ ಅವರು ಅದೆಷ್ಟೋ ಪ್ರಯತ್ನ ಮಾಡಿದರು ಕೂಡಾ ಸಾಫಲ್ಯಗೊಂಡಿರಲಿಲ್ಲ. ಬದಲಾಗಿ ಹೆಲ್ಮೆಟ್ ಹಾಕದೇ ಬೈಕ್ ಓಡಿಸೊ ರೂಢಿಯನ್ನು ಅಲ್ಲಿನ ಜನರು ಬಿಟ್ಟಿರಲಿಲ್ಲ.ಆದರೆ ಸದ್ಯದ ಎಸ್ಪಿ ಶ್ರೀನಾಥ್ ಜೋಶಿ ಹೆಲ್ಮೆಟ್ ಕಡ್ಡಾಯಗೊಳಿಸೊದಕ್ಕೆ ಅಂತಾನೇ ಡಿಫರೆಂಟ್ ಪ್ಲಾನ್ ಮಾಡಿ ಇದೀಗ ಯಶಸ್ವಿಯಾಗ್ತಿದ್ದಾರೆ.

ಪೆಟ್ರೋಲ್ ಹಾಗೂ ಡಿಸೇಲ್ ಅಸೋಸಿಯೇಷನ್ ಜೊತೆ ಮಿಟಿಂಗ್ ಮಾಡಿದ ಎಸ್ಪಿ ಹೆಲ್ಮೆಟ್ ಇದ್ದವರಿಗೆ ಮಾತ್ರ ಪೆಟ್ರೋಲ್ ಹಾಕುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಎಸ್ಪಿಯವರ ಆದೇಶದಂತೆ ಇದೀಗ ಎಲ್ಲ ಪೆಟ್ರೋಲ್ ಬಂಕ್ ನವರು ಅದನ್ನೇ ಫಾಲೋ ಮಾಡ್ತಾಯಿದ್ದೂ ಬೈಕ್ ಸವಾರರೆಲ್ಲ ಹೆಲ್ಮೆಟ್ ಹಾಕಿಕೊಂಡೇ ಬಂಕ್ ಗೆ ಬರಬೇಕಾಗಿರೊದ್ರಿಂದ ಅನಿವಾರ್ಯವಾಗಿ ಹೆಲ್ಮೆಟ್ ಕಡ್ಡಾಯ ಅನ್ನೊ ನಿಯಮಕ್ಕೆ ಬದ್ಧರಾಗ್ತಾಯಿದ್ದಾರೆ. ಜೊತೆಗೆ ಪ್ರಜ್ಞಾ ವಂತರಾದವರು ಇದನ್ನು ಸ್ವಾಗತ ಮಾಡ್ತಾಯಿದ್ದಾರೆ.

ಇನ್ನೂ ಆರಂಭದಲ್ಲಿ ಇದು ಕಷ್ಟ ಅನಿಸಿದರು ಕೂಡಾ ನಮ್ಮ ಒಳಿತಿಗಾಗಿ ನಾವು ಪೊಲೀಸ್ ಇಲಾಖೆಯಿಂದ ಜಾರಿಗೊಂಡ ನಿಯಮ ಪಾಲನೆ ಮಾಡ್ಲೇಬೇಕು. ಇಲ್ಲವಾದರೆ ಅದರಿಂದ ಇಲಾಖೆಗಿಂತ ನಮಗೆನೇ ತೊಂದರೆ ಅನ್ನುವ ಹೆಲ್ಮೆಟ್ ಧರಿಸಿದ ಬೈಕ್ ಸವಾರರು ಸಾರ್ವಜನಿಕರಲ್ಲಿ ತಾವೇ ಖುದ್ದಾಗಿ ಹೆಲ್ಮೆಟ್ ಧರಿಸುವಂತೆ ವಿನಂತಿ ಮಾಡ್ತಾಯಿದ್ದಾರೆ.

ಗದಗ ಪೊಲೀಸ್ ಇಲಾಖೆ ನೂರಾರು ಬಾರಿ ಜನರಿಗೆ ಹೆಲ್ಮೆಟ್ ಬಗ್ಗೆ ತಿಳಿಹೇಳಿದರು ಕೂಡ ಜಾರಿಗೆ ಬಾರದಿದ್ದ ನಿಯಮ ಇದೀಗ ಜಾರಿಯಾಗಿದ್ದೂ ಪೊಲೀಸ್​ ಇಲಾಖೆ ಸೇರಿದಂತೆ ಪ್ರಜ್ಞಾವಂತರಿಗೂ ಸಹ ಸಂತಸ ತಂದಿದೆ.

Next Story

RELATED STORIES