Top

ಪ್ರತಿಪಕ್ಷ ನಾಯಕ ಸ್ಥಾನ, ಇವ್ರು ಬಂದ ಮೇಲೆ ಕೊಡ್ತಾರಂತೆ..! ಹೆಚ್.ಕೆ ಪಾಟೀಲ್

ಪ್ರತಿಪಕ್ಷ ನಾಯಕ ಸ್ಥಾನ, ಇವ್ರು ಬಂದ ಮೇಲೆ ಕೊಡ್ತಾರಂತೆ..! ಹೆಚ್.ಕೆ ಪಾಟೀಲ್
X

ಬೆಂಗಳೂರು: ನಾನು ದೆಹಲಿಗೆ ಹೋಗಿದ್ದು ನಿಜ. ನಮ್ಮ ನಾಯಕರನ್ನು ಭೇಟಿ ಮಾಡಿ, ಅವರ ಜೊತೆ ಚರ್ಚಿಸಿರುವುದು ನಿಜ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ಒಪ್ಪಿಕೊಂಡಿದ್ದಾರೆ.

ಹೆಚ್.ಕೆ ಪಾಟೀಲ್ ಅವರು ಕೆಲವು ದಿನಗಳಿಂದ ಪ್ರತಿಪಕ್ಷದ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗೆ ಇಂದು ಪ್ರತಿಕ್ರಿಯೆ ನೀಡಿದ ಅವರು, ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಬರುತ್ತಾರೆ. ಹಿರಿಯ ನಾಯಕರ ಜೊತೆ ಚರ್ಚೆ ಮಾಡುತ್ತಾರೆ. ನಂತರ ಯಾರು ಪ್ರತಿಪಕ್ಷದ ನಾಯಕರು ಆಗಬೇಕೆಂಬುದನ್ನು ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ನಾನು ಸಿದ್ದರಾಮಯ್ಯಗೆ ಕಾಂಪಿಟೇಟರ್ ಅಲ್ಲ. ವಿಪಕ್ಷ ನಾಯಕನಾಗಿ ಈಗಾಗಲೇ ಕೆಲಸ ಮಾಡಿದ್ದೇನೆ. ನನಗೆ ಅನುಭವವಿದೆ, ನನ್ನನ್ನು ಸಹ ಪರಿಗಣಿಸಿ ಎಂದಿದ್ದೇನೆ. ಅದು ಬಿಟ್ಟು ಬೇರೆಯವರಿಗೆ ನಾನು ಪ್ರತಿಸ್ಪರ್ಧಿಯಲ್ಲ ಎಂದು ಅವರು ಸಮಜಾಯಿಸಿ ಉತ್ತರ ನೀಡಿದರು.

ಅಲ್ಲದೇ ವಲಸಿಗ, ಮೂಲಕಾಂಗ್ರೆಸ್ಸಿಗರಲ್ಲಿ ಯಾವುದೇ ಭೇದವಿಲ್ಲ. ಎಲ್ಲರೂ ಒಟ್ಟಾಗಿಯೇ ಪಕ್ಷ ಕಟ್ಟಬೇಕಿದೆ. ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರೂ ಇಲ್ಲ. ಪ್ರತಿಪಕ್ಷ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ರಾಜ್ಯಕ್ಕೆ ಒಳ್ಳೆಯದಾಗುವ ಹಾಗೆ ಪ್ರಯತ್ನ ಮಾಡುತ್ತೇನೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಹಿರಿಯರು, ಅವರಿಗೂ ನನ್ನ ಕೆಲಸದ ಬಗ್ಗೆ ಮೆಚ್ಚುಗೆ ಇರಬಹುದು. ಹೀಗಾಗಿ ನನ್ನ ಬೆನ್ನ ಹಿಂದೆ ಇದ್ದಾರೆ ಎಂದು ನೀವು ಹೇಳುತ್ತಿರುವಿರಿ ಎಂದು ಮಾಧ್ಯಮಗಳ ಮೇಲೆ ಹಾಕಿ, ಸ್ಪಷ್ಟವಾದ ಪ್ರತಿಕ್ರಿಯೇ ನೀಡದೆ ಜಾರಿಕೊಂಡರು.

Next Story

RELATED STORIES