Top

'ಬಿಜೆಪಿ ಸರ್ಕಾರ ತಾರತಮ್ಯ ನಡೆಸುತ್ತಿದೆ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನ್ಯಾಯವಾಗಿದೆ'

ಬಿಜೆಪಿ ಸರ್ಕಾರ ತಾರತಮ್ಯ ನಡೆಸುತ್ತಿದೆ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನ್ಯಾಯವಾಗಿದೆ
X

ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ,ಜೆಡಿಎಸ್ಗೊಂದು, ಬೇರೆಯವರಿಗೆ ಒಂದು ರೀತಿ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಯನಗರಕ್ಕೆ 317ಕೋಟಿ ಅನುದಾನ ನೀಡಿದ್ದರು. ಆದರೆ ಈಗ 120 ಕೋಟಿ ಮಾತ್ರ ನೀಡಿದ್ದಾರೆ. ಬಿಟಿಎಂ ಲೇಔಟ್ ಗೆ 305 ಕೋಟಿ ಇಡಲಾಗಿತ್ತು. ಅದರಲ್ಲಿ 107 ಕೋಟಿ ನೀಡಿದ್ದಾರೆ. ಅದೇ ಬಿಜೆಪಿ ಶಾಸಕರಿಗೆ ಇಲ್ಲಿನ ಅನುದಾನವನ್ನ ನೀಡಿದ್ದಾರೆ. ನಮಗೊಂದು, ಅವರಿಗೊಂದು ಯಾಕೆ..? ಎಂದು ರಾಮಲಿಂಗಾರೆಡ್ಡಿ ಖಾರವಾಗಿ ಪ್ರಶ್ನಿಸಿದ್ದಾರೆ.

ದಾಸರಹಳ್ಳಿಗೆ 258 ಕೋಟಿ ಮೈತ್ರಿ ಸರ್ಕಾರ ಇಟ್ಟಿತ್ತು. ಆದ್ರೆ ಈಗ 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಯಾವ ಅಭಿವೃದ್ಧಿ ಕೆಲಸ ಮಾಡೋಕೆ ಸಾಧ್ಯ..? ಕಾಂಗ್ರೆಸ್ ಶಾಸಕರ ಎಲ್ಲಾ ಕ್ಷೇತ್ರಗಳಿಗೂ ಅನ್ಯಾಯವಾಗಿದೆ. ಇದೀಗ ಪ್ರತಿಭಟನೆ ನಡೆಸಿದ್ದೇವೆ. ತಾರತಮ್ಯ ಸರಿಪಡಿಸದಿದ್ದರೆ ಮುಂದೆ ಇನ್ನಷ್ಟು ಹೋರಾಟ ರೂಪಿಸ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Next Story

RELATED STORIES