Top

ಬಿಜೆಪಿಗೆ ಬಿಗ್ ಶಾಕ್ ನೀಡಲು ರೆಡಿಯಾದ್ರಾ ಮಾಜಿ ಶಾಸಕ ರಾಜುಕಾಗೆ..?

ಬಿಜೆಪಿಗೆ ಬಿಗ್ ಶಾಕ್ ನೀಡಲು ರೆಡಿಯಾದ್ರಾ ಮಾಜಿ ಶಾಸಕ ರಾಜುಕಾಗೆ..?
X

ಚಿಕ್ಕೋಡಿ: ಮಾಜಿ ಶಾಸಕ ರಾಜು ಕಾಗೆ ಬಿಜೆಪಿಗೆ ಬಿಗ್ ಶಾಕ್ ನೀಡಲು ರೆಡಿಯಾಗಿದ್ದು, ಬಿಜೆಪಿ ಟಿಕೇಟ್ ನೀಡದಿದ್ದರೆ, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ರಾಜು ಕಾಗೆ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅನರ್ಹಗೊಂಡ ಶ್ರೀಮಂತ್ ಪಾಟೀಲ್ ಪುತ್ರ ಶ್ರೀನಿವಾಸ್ ಪಾಟೀಲ್‌ಗೆ ಬಿಜೆಪಿ ಟಿಕೇಟ್ ನೀಡಿದರೆ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಿಜೆಪಿಯ ನಿಷ್ಠಾವಂತರನ್ನು ಮತ್ತು ಹಳೆ ಜನರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕದಂತೆ ರಾಜು ಕಾಗೆ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಬಿಟ್ಟು, ಅನರ್ಹಗೊಂಡ ನಂತರ ಶ್ರೀಮಂತ ಪಾಟೀಲ್ ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ಅಲ್ಲದೇ ಶ್ರೀಮಂತ ಪಾಟೀಲ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ವೈಮನಸ್ಸಾಗಿದ್ದಾರೆ. ಶ್ರೀಮಂತ್ ಪಾಟೀಲ್ ಮಗ ಶ್ರೀನಿವಾಸ್‌ನನ್ನು ಬಿಜೆಪಿಯಲ್ಲಿ ಟಿಕೇಟ್ ನೀಡಿ ನಿಲ್ಲಿಸಿದರೆ ಬಿಜೆಪಿ ಕಾರ್ಯಕರ್ತರೇ ವಿರೋಧ ಮಾಡುವ ಸಾಧ್ಯತೆ ಇದೆ. ಹೀಗಾಗಿ ತಮಗೆ ಟಿಕೇಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿರುವ ರಾಜು ಕಾಗೆ, ಬಿಜೆಪಿ ಸಿದ್ದಾಂತ ಗೊತ್ತಿಲ್ಲದವರಿಗೆ ಟಿಕೇಟ್ ನೀಡಿದರೆ ಶಾಕ್ ನೀಡಲು ನಿರ್ಧರಿಸಿದ್ದಾರೆ.

Next Story

RELATED STORIES