Top

ಸಾಹೋ ಪ್ರಭಾಸ್ ಜೊತೆ ಸವರ್ಣ ದೀರ್ಘ ಸಂಧಿ ಟ್ರೈಲರ್​

ಸಾಹೋ ಪ್ರಭಾಸ್ ಜೊತೆ ಸವರ್ಣ ದೀರ್ಘ ಸಂಧಿ ಟ್ರೈಲರ್​
X

ಬೆಂಗಳೂರು: ಈಗ ನಾವು ಹೇಳಲು ಹೊರಟಿದ್ದು, ಅದೇ ವಿಚಾರವಾಗಿ ಗಾಂಧಿನಗರದಲ್ಲಿ ಸವರ್ಣ ದೀರ್ಘ ಸಂಧಿಯ ಬಗ್ಗೆ ಸಿನಿರಸಿಕರಿಗೆ ಹೇಳಲು ಹೊರಟಿದೆ ಹೊಸಬರ ತಂಡ. ಕೋಸ್ಟಲ್​​ವುಡ್​ಲ್ಲಿ ‘ಚಾಲಿ ಪೋಲಿಲು’ ಎಂಬ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರು ಈ ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಹಾಗೆಯೇ ಈ ಚಿತ್ರವು ಒಂದು ಗ್ಯಾಂಗ್ ಸ್ಟಾರ್​​, ಕಾಮಿಡಿ ಸಿನಿಮಾವಾಗಿದ್ದು, ಸಿನಿರಸಿಕರಿಗೆ ಹಾಸ್ಯದ ಕಚಗುಳಿ ಕೊಡುವುದರಲ್ಲಿ ನೋ ಡೌಟ್. ಇನ್ನು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈ ಚಿತ್ರದಲ್ಲಿ ನಟ-ನಟಿಯರಾಗಿ ಪದ್ಮಾಜಾ ರಾವ್, ಕೃಷ್ಣಾ ಅಡಿಗಾ, ಕಿರುತೆರೆ ನಿರೂಪಕ ನಿರಂಜನ್​ ದೇಶಪಾಂಡೆ ಮತ್ತು ರವಿ ಮಂಡ್ಯ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ನಾಯಕ ಒಬ್ಬ ರೌಡಿಯಾಗಿರುತ್ತಾನೆ. ಇನ್ನು ಈತ ಹೆಚ್ಚು ವಿದ್ಯೆಕಲಿತವನಲ್ಲ ಆದರೆ ವ್ಯಾಕರಣ ಪಂಡಿತನಾಗಿರುತ್ತಾನೆ. ಈತ ಕೇಳುವ ವ್ಯಾಕರಣ ಬಗೆಗಿನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲದವರಿಗೆ ಸರಿಯಾಗಿ ಒದೆಯುತ್ತಾನೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾವಾಗಿದೆಯಂತೆ.

ಇನ್ನು ಈ ಚಿತ್ರದ ನಾಯಕಿಯಾಗಿ ಸ್ಯಾಂಡಲ್​ವುಡ್​ನಲ್ಲಿ ಪೋಷಕ ಕಲಾವಿದರಾಗಿ ಗುರುತಿಸಲ್ಪಟ್ಟಿರುವ ರವಿ‌ ಭಟ್ (ವಿನಯ್ ಪ್ರಸಾದ್ ಸಹೋದರ) ಅವರ ಪುತ್ರಿ ಕೃಷ್ಣಾ ಅಭಿನಯಿಸಲಿದ್ದಾರೆ. ಈಕೆಯ ಮೊದಲ ಹೆಸರು ಭಾವನಾ ಭಟ್ ಈಗ ಕೃಷ್ಣಾ ಆಗಿ ಬದಲಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ಜೊತೆ ರಾಜಕುಮಾರ ಸಿನಿಮಾದಲ್ಲಿ ನಟಿಸಿದ ಅವರು, ಮೊದಲ ಬಾರಿ ನಾಯಕಿಯಾಗಿ ‘ಸವರ್ಣ ದೀರ್ಘ ಸಂಧಿ’ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.

ವೀರು ಟಾಕೀಸ್ ಮತ್ತು ಲಿಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗಿದೆ.ಅಲ್ಲದೇ ಚಿತ್ರಕ್ಕೆ ‌ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು, ಲೋಗಂತನ್ ಶ್ರೀನಿವಾಸ್ ರ ಕ್ಯಾಮೆರಾ ಕೈಚಳಕವಿದೆ.

Next Story

RELATED STORIES