ಐಸ್ ಫೇಶಿಯಲ್ ಅಂದ್ರೇನು ಗೊತ್ತಾ..? ಇದರ ಲಾಭಗಳೇನು..?

ಇಂದಿನ ದಿನಗಳಲ್ಲಂತೂ ಸೌಂದರ್ಯ ಇಮ್ಮಡಿಗೊಳಿಸಲು ಮಾರ್ಕೇಟ್ಗಳಿಗೆ ಬರುವ ಪ್ರಾಡಕ್ಟ್ಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ವಿವಿಧ ತರಹದ ಕ್ರೀಮ್, ಫೇಸ್ಪ್ಯಾಕ್, ಫೇಶಿಯಲ್ ಕಿಟ್ಗಳು ಮಾರ್ಕೇಟ್ಗೆ ಲಗ್ಗೆ ಇಟ್ಟಿದೆ. ಆದ್ರೆ ಈ ಎಲ್ಲ ಪ್ರಾಡೆಕ್ಟ್ಗಳನ್ನ ಕೊಂಡುಕೊಳ್ಳುವ ಮುನ್ನ ನಮ್ಮ ತ್ವಚೆಗೆ ಈ ಪ್ರಾಡೆಕ್ಟ್ಗಳು ಎಷ್ಟು ಸೇಫ್ ಅನ್ನೋದನ್ನ ನಾವು ಯೋಚಿಸಬೇಕಾಗತ್ತೆ.
ಕ್ಯಾಮಿಕಲ್ ಯುಕ್ತ ಪ್ರಾಡಕ್ಟ್ಗಳನ್ನ ಉಪಯೋಗಿಸುವ ಬದಲು ಮನೆಯಲ್ಲಿರುವ ವಸ್ತುಗಳಿಂದಲೇ ನಾವು ನಮ್ಮ ಸೌಂದರ್ಯ ಕಾಪಾಡಿಕೊಳ್ಳಬಹುದು. ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಮಿಶ್ರಣ, ಅರಿಶಿಣ ಇವೆಲ್ಲವನ್ನೂ ಕೂಡ ನಾವು ಮೊದಲಿಂದಲು ಉಪಯೋಗಿಸುತ್ತಿದ್ದು, ಸೌಂದರ್ಯ ವರ್ಧನೆಯಲ್ಲಿ ತುಂಬಾ ಸಹಕಾರಿಯಾಗಿದೆ. ಆದ್ರೆ ನಾವಿವತ್ತು ಹೊಸದಾಗಿ, ಮತ್ತೊಂದು ವಸ್ತುವನ್ನ ಉಪಯೋಗಿಸಿ ಫೆಶಿಯಲ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ. ಅಲ್ಲದೇ ಈ ಫೇಶಿಯಲ್ನ್ನು ನೀವು ಪ್ರತಿದಿನ ಮಾಡಿಕೊಳ್ಳಬಹುದು.
ಸೌಂದರ್ಯವರ್ಧನೆಗೆ ತುಂಬಾ ಸಹಕಾರಿ ಈ ಐಸ್ ಫೇಶಿಯಲ್
ಬೇಕಾಗುವ ಸಾಮಗ್ರಿ: ದೊಡ್ಡ ಬೌಲ್ ತಣ್ಣೀರು, 7-8 ಐಸ್ ಕ್ಯೂಬ್ಸ್, 5-6 ತುಂಡು ಸೌತೆಕಾಯಿ , 3-4 ಸ್ಪೂನ್ ರೋಸ್ ವಾಟರ್.
ನಿಮ್ಮ ಮುಖ ಮುಳುಗುವಷ್ಟು ದೊಡ್ಡ ಬೌಲನ್ನ ತೆಗೆದುಕೊಳ್ಳಿ. ಅದರ ತುಂಬ ತಣ್ಣೀರು ಹಾಕಿ ಅದಕ್ಕೆ ಐಸ್ ಕ್ಯೂಬ್ಸ್, ಸೌತೆಕಾಯಿ, ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಆದರಲ್ಲಿ ನಿಮ್ಮ ಮುಖವನ್ನ 10 ಸೆಕೆಂಡ್ಸ್ ಇರಿಸಿ, ನಂತರ 10 ಸೆಕೆಂಡ್ಸ್ ಬ್ರೇಕ್ ತೆಗೆದುಕೊಳ್ಳಿ. ಹೀಗೆ 2ರಿಂದ 3 ಬಾರಿ ಮಾಡಿ. ಈ ಫೇಶಿಯಲನ್ನ ನೀವು ಪ್ರತಿದಿನ ಮಾಡಬಹುದು. ಇದು ನಿಮ್ಮ ತ್ವಚೆಯನ್ನ ಶುದ್ಧಗೊಳಿಸಿ, ಅಂದಗಾಣಿಸುವುದರಲ್ಲಿ ಸಹಕಾರಿಯಾಗಿದೆ.