Top

'ಮುಂದೆ ಬಿಜೆಪಿಯವರು ನಿರಾಶ್ರಿತರಾಗಬಹುದು' - ಮಾಜಿ ಸಚಿವ ರಾಮಲಿಂಗಾರೆಡ್ಡಿ

ಮುಂದೆ ಬಿಜೆಪಿಯವರು ನಿರಾಶ್ರಿತರಾಗಬಹುದು - ಮಾಜಿ ಸಚಿವ ರಾಮಲಿಂಗಾರೆಡ್ಡಿ
X

ಹೈಲೈಟ್ಸ್​: 1. ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ತಿರುಗೇಟು.

2. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ವಾದ ಬಗ್ಗೆ ಮಾತು.

3. ಕೇಂದ್ರ ಸರ್ಕಾರ ನೆರೆ ಪರಿಹಾರದ ಬಗ್ಗೆ ಪ್ರತಿಕ್ರಿಯೆ.

ಕಾಂಗ್ರೆಸ್ಸಿಗರು ರಾಜಕೀಯ ನಿರಾಶ್ರಿತರು ಎಂದಿದ್ದ ಸಚಿವ ಕೆ.ಎಸ್​ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜಕಾರಣ ಕಾಲಚಕ್ರ, ಮೇಲಿದ್ದವರು ಕೇಳಗೆ ಬರ್ತಾರೆ, ಕೆಳಗಿದ್ದವರು ಮೇಲೆ ಬರ್ತಾರೆ, ಈ ಹಿಂದೆ ಈಶ್ವರಪ್ಪ ಸೋತಿರಲಿಲ್ವಾ(?) ಈಗ ಗೆದ್ದಿದ್ದಾರೆ ಎಂದು ಅವರು ಶನಿವಾರ ಹೇಳಿದರು.

ಬಾಗಲಕೋಟೆಯಲ್ಲಿಂದು ಮಾಧ್ಯಮದ ಜೊತೆ ಮಾತಿಗಿಳಿದ ಅವರು, ಕಾಂಗ್ರೆಸ್ಸಿಗರು ಯಾರೂ ನಿರಾಶ್ರಿರ ಕೇಂದ್ರದಲ್ಲಿಲ್ಲ, ಎಲ್ಲರಿಗೂ ಒಂದು ಕಾಲ ಬರುತ್ತೆ, ಮುಂದೆ ಬಿಜೆಪಿಯವರು ನಿರಾಶ್ರಿತರಾಗಬಹುದು ಎಂದು ಕಾಂಗ್ರೆಸ್​ ಶಾಸಕ ರಾಮಲಿಂಗಾರೆಡ್ಡಿ ಅವರು ಕೆ.ಎಸ್ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಇನ್ನು ರಾಜ್ಯ ಸರ್ಕಾರದ ಆಯುಷ್ಯ ಈಗಲೇ ಹೇಳಕಾಗಲ್ಲ, ಅನರ್ಹ ಶಾಸಕರನ್ನು ಹೇಗೆ ನಡೆಸುಕೊಳ್ಳುತ್ತಾರೆ ಅದರ ಮೇಲೆ ಸರ್ಕಾರದ ಅವಧಿ ನಿರ್ಧಾರ ಆಗುತ್ತೆ ಎಂದರು.

ಸದ್ಯ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಬ್ಬರ ವಾಗ್ವಾದ ಬಗ್ಗೆ ಮಾತನಾಡಿದ ಅವರು, ಮಳೆ ನಿಂತ ಮೇಲೂ ಗಿಡದ ಹನಿಗಳುದುರುತ್ತಾವಲ್ಲ(?) ಇದು ಹಾಗೇನೆ, ಸ್ವಲ್ಪ ದಿನ ನಡೆಯುತ್ತೆ, ಅದರ ಬಗ್ಗೆ ಈಗ ನಾನು ಮಾತಾಡಲ್ಲ, ಸಮ್ಮಿಶ್ರ ಸರ್ಕಾರ ಪತನಕ್ಕೆ ಬೇರೆ ಬೇರೆ ಕಾರಣಗಳು ಇವೆ. ನಾನು ಮೌನವಾಗಿಲ್ಲ, ಸಮಯ ಬಂದಾಗೆಲ್ಲ ಮಾತನಾಡುತ್ತಾ ಬಂದಿದ್ದೇನೆ ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕ ನೆರೆ ಹಾನಿ ಸಂಗತಿ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ತಕ್ಷಣದ ನೆರವು ನೀಡಬೇಕಿತ್ತು. ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ನೆರೆ ವೀಕ್ಷಣೆಗೆ ಯಾಕೆ ಬರ್ಲಿಲ್ಲ ಗೊತ್ತಿಲ್ಲ, ಹಿಂದೆ ಕೇರಳಕ್ಕೆ ಬಂದಿದರು. ಇಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದಿದರು, ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಿದರೆ ಮೋದಿ ಬರ್ಲಿಲ್ಲ ಅನ್ನೋ ಪ್ರಶ್ನೆ ಬರ್ತಿಲಿಲ್ಲ, ಕೇಂದ್ರ ಇಂತಹ ಸಮಯದಲ್ಲಿ ನೆರವು ಕೊಡದೇ ಇನ್ಯಾವಾಗ ಕೊಡುತ್ತಿದ್ದರು(?) ಅಲ್ಲದೇ ರಾಜ್ಯದಿಂದ 25 ಸಂಸದರು ಹೋಗಿದ್ದಾರೆ, ಮುಖ್ಯಮಂತ್ರಿ, ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕಿತ್ತು ಎಂದು ಅವರು ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು.

Next Story

RELATED STORIES