Top

'ನನ್ನ ಮತ್ತು ಕುಮಾರಸ್ವಾಮಿ ನಡುವೆ ಹೊಡೆದಾಟ ಅದು ಭ್ರಮೆ' - ಹೆಚ್​.ಡಿ ರೇವಣ್ಣ

ನನ್ನ ಮತ್ತು ಕುಮಾರಸ್ವಾಮಿ ನಡುವೆ ಹೊಡೆದಾಟ ಅದು ಭ್ರಮೆ - ಹೆಚ್​.ಡಿ ರೇವಣ್ಣ
X

ಬೆಂಗಳೂರು: ನಾನು ಯಾವ ಇಲಾಖೆಯಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ, ಹಾಸನದ ವಿಷಯದಲ್ಲಿ ಮಾತ್ರ ನಾನು ಕೆಲವು ಕೆಲಸ ಮಾಡಿದ್ದೇನೆ ಎಂದು ಹೆಚ್​.ಡಿ ರೇವಣ್ಣ ಅವರು ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾರಾಯಣಗೌಡ ನನ್ನ ಬಗ್ಗೆ ಏನಾದ್ರೂ ಆರೋಪ ಮಾಡಿದ್ದಾರಾ(?) ಕೆಲವರು ಮೊದಲೇ ಆರೋಪ ಮಾಡಬಹುದಿತ್ತು. ಮುಂಬೈಗೆ ಹೋದ ನಂತರ ಯಾಕೆ ಆರೋಪ ಮಾಡುತ್ತಿದ್ದಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನು ವಸತಿ ಇಲಾಖೆ ಅಧಿಕಾರಿಗಳ ವರ್ಗಾವಣೆ ಮಾಡಿಲ್ಲ, ಸೂಪರ್‌ಡೆಂಟ್ ಇಂಜಿನಿಯರ್ ಬೇಕು ಅಂದ್ರು, ಹಾಕಿದ್ದೇನೆ. ನಾನು ಒಬ್ಬರನ್ನ ರಾಜ್ಯಸಭೆ ಸದಸ್ಯರನ್ನ ಮಾಡಿದ್ದೆ. ಮಹಾಲಕ್ಷ್ಮೀ ತಾಯಿ ಸನ್ನಿಧಿಗೆ ಕರೆದುಕೊಂಡು ಹೋಗಿದ್ದೆ. ಆ ತಾಯಿ ಅವರನ್ನ ನೋಡಿಕೊಳ್ಳಲಿ, ಶಿಕ್ಷೆ ನೀಡುವುದಾದರೆ ತಾಯಿಯೇ ನೀಡಲಿ ಎಂದು ಅವರು ತಿಳಿಸಿದರು.

ಸದ್ಯ ನಾರಾಯಣಗೌಡರಿಗೆ ನಮ್ಮ ಕುಟುಂಬದಿಂದ ಅನ್ಯಾಯ ಆಗಿಲ್ಲ, ಅನ್ಯಾಯ ಆಗಿದ್ದರೆ ಮುಂದೆ ಅವರಿಗೆ ಒಳ್ಳೆದಾಗಲಿ. ನಾನು ಏಕೆ ನಿಂಬೆಹಣ್ಣು ಇಟ್ಟುಕೊಳ್ಳಲಿ. ನನ್ನ ಮೇಲೆ ದೈವಾನುಗ್ರಹ ಇದೆ, ಯಾರೂ ಏನೂ ಮಾಡಕಾಗಲ್ಲ ಎಂದರು.

ಅಲ್ಲದೇ ಬಿಜೆಪಿಗೆ ತೊಂದರೆ ಬೇಡ, ಸಿಎಂ ಸ್ವಯಂ ಪ್ರೇರಿತವಾಗಿ ವಿಶ್ವಾಸ ಮತಯಾಚನೆ ಕೇಳಿದ್ದಾರೆ. ನಾಳೆ ಏನಾಗುತ್ತದೆ, ನನಗೂ ಗೊತ್ತಿಲ್ಲ, ಸಿಎಂ ಕುಮಾರಸ್ವಾಮಿ ಅವರಿಗೆ ಎಲ್ಲವೂ ಗೊತ್ತಿದೆ. ನನಗೆ ಮಂತ್ರಿ ಕೆಲಸ ಕೊಟ್ಟಿದ್ದಾರೆ, ಅದನ್ನಷ್ಟೆ ಮಾಡುತ್ತೇನೆ ಎಂದು ಅವರು ನುಡಿದರು.

ನಮ್ಮ ಕುಟುಂಬದಲ್ಲಿ ಹೊಡೆದಾಟ ಇಲ್ಲ, ಕುಮಾರಸ್ವಾಮಿ, ದೇವೇಗೌಡರು ಏನೇ ಹೇಳಿದರೂ ಯೆಸ್, ನಾನು ಕುಮಾರಸ್ವಾಮಿ ಹೊಡೆದಾಡುತ್ತೇವೆ ಅಂತ ತಿಳಿದಿದ್ದರೆ ಅದು ಭ್ರಮೆ, ನಮ್ಮ ಕುಟುಂಬದಲ್ಲಿ ಯಾವುದೇ ಒಡಕಿಲ್ಲ, ನಮ್ಮ ತಂದೆ-ತಾಯಿ ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಮ್ಮ ಮನೆ ದೇವರು ಈಶ್ವರನ ಆಶೀರ್ವಾದ ಇದೆ ಎಂದು ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಅವರು ಮಾತನಾಡಿದ್ದಾರೆ.

Next Story

RELATED STORIES