Top

ನಾನು ಮದುವೆಗೆ ಹೋದ್ರು ನನ್ನ ಫಾಲೋ ಮಾಡ್ತಾರೆ : ಸೌಮ್ಯರೆಡ್ಡಿ ಕಿಡಿ

ನಾನು ಮದುವೆಗೆ ಹೋದ್ರು ನನ್ನ ಫಾಲೋ ಮಾಡ್ತಾರೆ : ಸೌಮ್ಯರೆಡ್ಡಿ ಕಿಡಿ
X

ಬೆಂಗಳೂರು: ಮಾಧ್ಯಮಗಳ ವಿರುದ್ಧ ಗರಂ ಆದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ, ನೋಡಿ ಜನರ ಸಮಸ್ಯೆ ತೋರಿಸಲ್ಲ ಬದಲಾಗಿ ನಾನು ಮದುವೆಗೆ ಹೋದ್ರು ನನ್ನ ಫಾಲೋ ಮಾಡ್ತಾರೆ ಇದು ಸರಿನಾ ಎಂದು ಆಕ್ರೋಶಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ನಿತ್ಯ ನಾನು ರಾಜೀನಾಮೆ ಕೊಡುತ್ತೇನೆ ಎಂದು ಮಾಧ್ಯಮಗಳು ಹೇಳುತ್ತಿವೆ, ನೋಡಿ ಜನರ ಸಮಸ್ಯೆ ತೋರಿಸಲ್ಲ, ಬದಲಾಗಿ ನನ್ನ ಫಾಲೋ ಮಾಡ್ತಾರೆ. ತುಂಬಾ ಒಳ್ಳೆಯ ಜನಪರ ಕೆಲಸ ಮಾಡಿದ್ದಿನಿ ಆದರೆ ಅದನ್ನು ಕವರ್ ಮಾಡಲ್ಲ ಇನ್ನಾದರೂ ದಯಮಾಡಿ ಜನರ ಕಾರ್ಯಕ್ರಮ ಕವರ್ ಮಾಡಿ ಎಂದು ಸೌಮ್ಯರೆಡ್ಡಿ ಮನವಿ ಮಾಡಿದರು.

ರಾಜೀನಾಮೆ ವಾಪಸ್ ಪಡೆಯುವುದರ ಬಗ್ಗೆ ತಂದೆಯವರನ್ನೇ ಕೇಳಿ , 45ವರ್ಷಗಳ ಬೇಸರ ಇದು. ನೆನ್ನೆ ನಾಯಕರುಗಳು ತಂದೆಯವರನ್ನು ಭೇಟಿ ಮಾಡಿದ್ದಾರೆ. ನಾನು ಶಾಸಕಾಂಗ ಪಕ್ಷದ ಸಭೆಗೆ ಹೊರಟ್ಟಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ನನ್ನ ತಂದೆ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, 7 ಬಾರಿ ಶಾಸಕರಾಗಿ ಸಚಿವರಾದವರನ್ನು ಮೈತ್ರಿ ಪಕ್ಷದಲ್ಲಿ ಮೂಲೆ ಗುಂಪು ಮಾಡಲಾಗಿದೆ. ಕೆಲವು ನಾಯಕರು ನನ್ನ ತಂದೆಯನ್ನು ಹೇಗೆ ನಡೆಸಿಕೊಂಡರು ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದಾರು.

ಯಾರೋ ಶಾಸಕರು ರೆಸಾರ್ಟ್​ಗೆ ಹೋದರೆ ನಾನೇನು ಮಾತಾನಾಡಲಿ, ಜನ ಬಾಯಿಗೆ ಬಂದ ಹಾಗ ಮಾತನಾಡುತ್ತಾರೆ ಎಂದು ಸೌಮ್ಯರೆಡ್ಡಿ ಕಿಡಿ ಕಾರಿದ್ದರು.

ಸದ್ಯ ಒಂದು ವರ್ಷದಿಂದ ಹೇಳ್ತಿದಾರೆ ಅವರು, 45 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ ತಂದೆಯನ್ನು ಮೂಲೆಗುಂಪು ಮಾಡಿದ್ದಾರೆ ಅದಕ್ಕೆ ಬೇಸರವಾಗಿ ರಾಜೀನಾಮೆ ಕೊಟ್ಟಿರೋದು ಎಂದು ಶಾಸಕಿ ಸೌಮ್ಯ ರೌಡಿ ಅವರು ತಿಳಿಸಿದ್ದರು. ನಾನು ರಾಜೀನಾಮೆ ನೀಡಲ್ಲ, ಸೋನಿಯಾ ಗಾಂಧಿ ಜೊತೆ ಮಾತನಾಡಿ ಬಂದಿದ್ದೇನೆ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೌಡಿ ಈ ಹಿಂದೆ ತಿಳಿಸಿದ್ದಾರೆ.

Next Story

RELATED STORIES