ಕುಮಾರಸ್ವಾಮಿ ರಾಜೀನಾಮೆ ಕೊಡಲಿ – ಯಡಿಯೂರಪ್ಪ ಆಗ್ರಹ

ನಾಳೆ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡಲಿ,  ಇಲ್ಲವಾದರೆ ಅವರು ಹೇಳಿರುವಂತೆ ವಿಶ್ವಾಸ ಮತ ಯಾಚನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ನಾಳೆಯೇ ವಿಶ್ವಾಸ ಮತ ಯಾಚನೆಗೆ ಮನವಿ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಎಂಟಿಬಿ ನಾಗರಾಜು ಮತ್ತು ಸುಧಾಕರ್ ಮನವೊಲಿಕೆಗೆ  ಪ್ರಯತ್ನ ಮಾಡಿದರು.  ಆದರೂ ಅವರಿಬ್ಬರು ನಿಮ್ಮ ಜೊತೆಗೆ ಇರಲ್ಲ ಅಂತ ಹೋದರು, ನಾಳೆ ನಡೆಯುವ ಸಲಹಾ ಕಲಾಪ ಸಭೆಯಲ್ಲೂ ನಾನು ಸ್ಪೀಕರ್ ಗೆ ನಾಳೆಯೇ ವಿಶ್ವಾಸ ಮತ ಯಾಚನೆಗೆ ಸಮಯ ಕೊಡಿ ಅಂತ ಮನವಿ ಮಾಡ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಮೈತ್ರಿ ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿದೆ

ನಿನ್ನೆ ಕೂಡ  ಮೈತ್ರಿ ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿದ್ದಾಗಿದೆ, ಇನ್ನೂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದರು.

ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ಧೈರ್ಯ

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಹೋದ ಶಾಸಕರನ್ನೇ ತಡೆದು ನಿಲ್ಲಿಸಲು ಸಾಧ್ಯವಾಗದ ಸಿಎಂ ಈಗ ಬಹುಮತ ಸಾಬೀತುಪಡಿಸಲು ಸಮಯ ಕೇಳುತ್ತಿದ್ದಾರೆ. ಹೆಚ್​ಡಿಕೆ ಅವರ ಈ ಮಾತಿನಲ್ಲಿ ಯಾವುದೋ ರಾಜಕೀಯ ಪಿತೂರಿ ಅಥವಾ ಷಡ್ಯಂತ್ರದ ವಾಸನೆ ಬರುತ್ತೀದೆ.  ಈ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವೇ ಇಲ್ಲ. ಆದರೂ, ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ಧೈರ್ಯ ಮಾಡಿದ್ದಾರೆ. ಈ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಪ್ರಸ್ತುತ ರಾಜಕೀಯ ವಾತಾವರಣ ಬಿಜೆಪಿ ಅನುಕೂಲಕರವಾಗಿದೆ. ಸರ್ಕಾರ ಕೆಲವೇ ದಿನಗಳಲ್ಲಿ ಉರುಳುವುದು ನಿಜ ಎಂದು ತಿಳಿಸಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.