ಕ್ರಿಕೆಟ್​ ಕಾಶಿಯಲ್ಲಿ ಬದ್ಧ ವೈರಿಗಳ ಬಿಗ್ ಫೈಟ್

ಇಡೀ ಕ್ರಿಕೆಟ್​ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಕ್ರಿಕೆಟ್​ ಕಾಶಿ ಲಾರ್ಡ್ಸ್​ ಅಂಗಳದಲ್ಲಿ ಮಾರ್ಗನ್ ಪಡೆ ನೇತೃಥ್ವದ ಆತಿಥೇಯ ಇಂಗ್ಲೆಂಡ್ ಮತ್ತು ಕೇನ್ ವಿಲಿಯಮ್ಸನ್​ ನೇತೃತ್ವದ ಇಂಗ್ಲೆಂಡ್ ತಂಡ ಮುಖಾಮುಖಿಯಾಗುತ್ತಿವೆ.

ವಿಶ್ವ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಬಲಿಷ್ಠ ತಂಡಗಳು ಆದರೆ ವಿಶ್ವಕಪ್ ವಿಷಯ ಬಂದಾಗ ಎರಡೂ ತಂಡಗಳು ವೈಫಲ್ಯ ಅನುಭವಿಸಿದ್ದೆ ಹೆಚ್ಚು. ಪ್ರತಿ ವಿಶ್ವಕಪ್​ನಲ್ಲೂ ಉಯ ತಂಡಗಳು ಬಲಿಷ್ಠ ತಂಡವನ್ನ ಕಟ್ಟಿಕೊಂಡು ಬಂದ್ರು ವಿಶ್ವಕಪ್​ ಗೆಲ್ಲುವ ಅವಕಾಶ ಮಾತ್ರ ಇನ್ನು ಕೂಡಿ ಬಂದಿರಲಿಲ್ಲ. ಇಡೀ ಜಗತ್ತಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಆಂಗ್ಲರು ಇದುವರೆಗೂ ವಿಶ್ವಕಪ್ ಗೆದ್ದಿಲ್ಲ ಅನ್ನೋದೇ ಅಚ್ಚರಿ ವಿಷಯವಾಗಿತ್ತು. ಇನ್ನು ಶ್ರೇಷ್ಠ ಆಟಗಾರರನ್ನನೊಳ್ಗೊಂಡ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಚೆನ್ನಾಗಿ ಆಡಿ ನಿರ್ಣಾಯಕ ಪಂದ್ಯದಲ್ಲಿ ಎಡವಿ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗುತ್ತಾ ಬಂದಿದೆ.

ಕಳೆದ 12 ವಿಶ್ವಕಪ್ ಗೆಲ್ಲದೇ ನಿರಾಸೆ ಅನುಭವಿಸಿದ್ದ ಇಂಗ್ಲೆಂಡ್ ಮತ್ತು ಕಿವೀಸ್ ಈ ಬಾರಿ ಬಲಿಷ್ಠ ತಂಡವನ್ನ ಕಟ್ಟಿಕೊಂಡು ಕಣಕ್ಕಿಳಿದಿವೆ. ಅದರಲ್ಲೂ ಮಾರ್ಗನ್ ಪಡೆ ತವರಿನಲ್ಲಿ ವಿಶ್ವಕಪ್ ಆಡುತ್ತಿರೋದ್ರಿಂದ ಈ ಸಲ ಕಪ್ ನಮ್ಮದೇ ಅಂತ ನಮ್ಮದೇ ಅಂತ ಹೇಳಿಕೊಂಡು ಭಾರೀ ತಯಾರಿಯೊಂದಿಗೆ ಕಣಕ್ಕಿಳಿದಿತ್ತು. ಇನ್ನು ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಕಳೆದ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿತ್ತು. ಇದೀಗ ,ಮತ್ತೊಮ್ಮೆ ಫೈನಲ್ ಪ್ರವೇಶಿಸಿದ್ದರಿಂದ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದೆ.

ಟೂರ್ನಿಯಲ್ಲಿ ಸಿಹಿ ಕಹಿ ಎರಡನ್ನೂ ಕಂಡಿರುವ ಮಾರ್ಗನ್ ಪಡೆ ಸೆಮಿಫೈನಲ್​ನಲ್ಲಿ ಫಿಂಚ್ ಪಡೆಯನ್ನ ಪಂಕ್ಚರ್ ಮಾಡಿ ಅಚ್ಚರಿ ಫಲಿತಾಂಶ ಕೊಟ್ಟಿತ್ತು. ಇದೀಗ ಫೈನಲ್ ಪಂದ್ಯದಲ್ಲೂ ಕಿವೀಸ್ ಕಿವಿ ಹಿಂಡಿ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ವಿಶ್ವ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆಯಲು ಮಾರ್ಗನ್ ಪಡೆ ಸಜ್ಜಾಗಿದೆ. ಜಾನಿ ಬೈರ್ ಸ್ಟೊ, ಕ್ಯಾಪ್ಟನ್ ಇಯಾನ್ ಮಾರ್ಗನ್, ಜೋ ರೂಟ್ ಬ್ಯಾಟಿಂಗ್ ವಿಭಾಗದ ಸ್ಟಾರ್ ಆಟಗಾರರಾಗಿದ್ದಾರೆ. ಇನ್ನು ಬೌಲಿಂಗ್ ಡಿಪಾರ್ಟ್​ಮೆಂಟ್​ನಲ್ಲಿ ಕ್ರಿಸ್​ ವೋಕ್ಸ್ , ಆದಿಲ್ ರಶಿದ್ ಸ್ಟಾರ್ ಬೌಲರ್ಸ್​ಗಳಾಗಿದ್ದಾರೆ.

ವಿಶ್ವಕಪ್​ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಇದುವರೆಗೂ 9ಬಾರಿ ಮುಖಾಮುಖಿಯಾಗಿವೆ. ಆಂಗ್ಲರು 4 ಬಾರಿ ಗೆದ್ರೆ ನ್ಯೂಜಿಲೆಂಡ್ ತಂಡ 5 ಬಾರಿ ಗೆದ್ದಿದೆ.

ಕಳೆದ ವಿಶ್ವಕಪ್​ನಲ್ಲಿ ನಿರಾಸೆ ಅನುಭವಿಸಿದ್ದ ಕೇನ್ ಗ್ಯಾಂಗ್ ಈ ಬಾರಿ ಬಲಿಷ್ಠ ತಂಡವನ್ನ ಕಟ್ಟಿಕೊಂಡು ಬಂದಿದೆ. ಟೂರ್ನಿಗೂ ಮುನ್ನ ಕೇನ್ ಗ್ಯಾಂಗ್ ಆಟ ನೋಡಿದವರೆಲ್ಲ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎಂದು ವಿಶ್ಲೇಶಿಸಲಾಗಿತ್ತು. ಇದಕ್ಕೆ ತಕ್ಕಂತೆ ಕೇನ್ ಪಡೆ ಲೀಗ್​ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಗೆದ್ದು ಭರವಸೆ ಮೂಡಿಸಿತ್ತು. ಕೇನ್ ಪಡೆ ಲೀಗ್​ನಲ್ಲಿ 9 ಂದ್ಯಗಳನ್ನಾಡಿ 5 ಪಂದ್ಯಗಳನ್ನ ಗೆದ್ದಿತ್ತು. ನಂತರ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಸೈನ್ಯವನ್ನ ಸೋಲಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ನಾಯಕ ಕೇನ್ ವಿಲಿಯಮ್ಸನ್, ರಾಸ್ ಟೇಲರ್ , ಟಾಮ್ ಲಾಥಮ್ ತಂಡದ ಬ್ಯಾಟಿಂಗ್ ಸ್ಟಾರ್ಸ್​ಗಳಾಗಿದ್ದಾರೆ. ಟ್ರೆಂಟ್ ಬೌಲ್ಟ್​ ಮತ್ತು ಮ್ಯಾಟ್​ ಹೆನ್ರಿ ತಂಡದ ಬೌಲಿಂಗ್ ಸ್ಟಾರ್ಸ್​ಗಳಾಗಿದ್ದಾರೆ.

ಒಟ್ಟಾರೆ ವಿಶ್ವಕಪ್ ಎತ್ತಿ ಹಿಡಿಯಲು ಮಾರ್ಗನ್ ಪಡೆ ಮತ್ತು ಕೇನ್ ಗ್ಯಾಂಗ್ ಕಾತರರಾಗಿದ್ದು ಯಾರು ಯಾರ ಮೇಲೆ ಸವಾರಿ ಮಾಡಿ ಗೆಲ್ತಾರೆ ಅನ್ನೊದನ್ನ ಕಾದು ನೋಡಬೇಕಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.