ವಿಶ್ವಕಪ್​ ವಿಜೇತ ಮಾಜಿ ಕ್ರಿಕೆಟಿಗ ಎಂಎಸ್​ ಧೋನಿ ವಿದಾಯದ ಬಗ್ಗೆ ರಿವಿಲ್​!

2019ರ ಕ್ರಿಕೆಟ್ ​ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತ ತಂಡ ನ್ಯೂಜಿಲೆಂಡ್​ ವಿರುದ್ಧ ಸೋತ ಬೆನ್ನಲ್ಲೆ ​ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಜಗತ್ತಿನ ಭಾರತೀಯ ದಂತಕಥೆ ಮಾಜಿ ನಾಯಕ ಮಹೇಂದ್ರ ಸಿಂಗ್​​ ಧೋನಿ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ನೀಡಬಹುದು ಎಂಬ ವದಂತಿಗಳು ಹರಿದಾಡುತ್ತಿವೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ವಿಶ್ವಕಪ್ ವಿಜೇತ ಸ್ಟೀವ್ ವಾ ಅವರು ಧೋನಿಗೆ ಮಾತ್ರ ತಮ್ಮ ನಿವೃತ್ತಿ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಬೇಕು ಎಂಬ ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಿಧಾನಗತಿಯ ಇನ್ನಿಂಗ್ಸ್‌ಗಾಗಿ ಅನುಭವಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ನನ್ನು ಸಾಕಷ್ಟು ಅಭಿಮಾನಿಗಳು ನಿಂದಿಸಿದ ಇತ್ತೀಚಿನ ಬೆಳವಣಿಗಳನ್ನು ಗಮನಿಸಿ ವಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಟೈಮ್ಸ್ ನೌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಎಂ.ಎಸ್​ ಧೋನಿ ಅವರಿಗೆ ನಿವೃತ್ತಿಯಾಗಬೇಕು ಅಂತ ಅನಿಸಿದಾಗ ಅವರು ನಿವೃತ್ತಿ ಹೊಂದುತ್ತಾರೆ ಅದನ್ನು ಯಾರು ಅವರಿಗೆ ಹೇಳಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಳಿಕ ಆಟದ ಬಗ್ಗೆ ಮಾತನಾಡಿದ ಅವರು, ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ನಿಗದಿಪಡಿಸಿದ 50 ಓವರ್‌ಗಳಲ್ಲಿ 239/8 ರನ್ ಗಳಿಸಿತು. ಇದಕ್ಕೆ ಉತ್ತರಿಸಿದ ಟೀಮ್ ಇಂಡಿಯಾ ಇನ್ನಿಂಗ್ಸ್‌ನಲ್ಲಿ ಮೂರು ಎಸೆತಗಳು ಬಾಕಿ ಇರುವಾಗ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 221ರನ್​ಗಳಿಗೆ ಆಲೌಟ್​ ಆಗಿ ನ್ಯೂಜಿಲೆಂಡ್​ ವಿರುದ್ಧ ಸೋಲು ಕಂಡಿತು. ರಿಷಭ್ ಪಂತ್ (32), ಹಾರ್ದಿಕ್ ಪಾಂಡ್ಯ (32), ರವೀಂದ್ರ ಜಡೇಜಾ (77) ಮತ್ತು ಧೋನಿ (50) ಸ್ವತಃ ಭಾರತದ ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ (1), ಕೆಎಲ್ ರಾಹುಲ್ (1) ಮತ್ತು ವಿರಾಟ್ ಕೊಹ್ಲಿ (1) ಬ್ಯಾಟಿಂಗ್​ನಲ್ಲಿ ವಿಫಲರಾದರು.

ಧೋನಿ ಎಂಟನೇ ಬ್ಯಾಟ್ಸ್‌ಮನ್‌ ಆಗಿ ನಿರ್ಗಮಿಸಿದಾಗ, ಸ್ಕೋರ್‌ಲೈನ್ ಹತ್ತು ಎಸೆತಗಳು ಬಾಕಿ ಇರುವಾಗ 215 ಅನ್ನು ಹೊಂದಿತು. ಆದರೆ, ಏಳು ಎಸೆತಗಳಲ್ಲಿ ಕೇವಲ ಆರು ರನ್‌ಗಳನ್ನು ಸೇರಿಸುವಾಗ ಉಳಿದ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಭಾರತ ಸಂಪೂರ್ಣವಾಗಿ ಸೋಲಿಗೆ ಶರಣಾಯಿತು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.