ಬಾಯಿ ಮಾತಿನಲ್ಲಿ ಹರಿಶ್ಚಂದ್ರ ಆದ್ರೆ ಸಾಲದು ಕೆಲಸದಲ್ಲಿ ತೋರಿಸಬೇಕು

ತುಮಕೂರು: ಬರೀ ಬಾಯಿ ಮಾತಿನಲ್ಲಿ ಹರಿಶ್ಚಂದ್ರ ಆಂದರೆ ಸಾಲದು ಕೆಲಸದಲ್ಲಿ ತೋರಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ವಿರುದ್ಥ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ಹೊರಹಾಕಿದ್ದಾರೆ.

ರಮೇಶ್ ಕುಮಾರ್ ವಿರುದ್ಧ ಸೊಗಡು ಶಿವಣ್ಣ ವ್ಯಂಗ್ಯ

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ಆಟ ಹಾಡುತ್ತ ಇದ್ದರೆ. ಪಕ್ಷಪಾತ ಮಾಡುತ್ತಿದ್ದಾರೆ ಎಂದು  ರಮೇಶ್ ಕುಮಾರ್ ವಿರುದ್ಧ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.

ಬಹುಮತ ಇರೋ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶ ನೀಡಬೇಕಿತ್ತು

ಸ್ಪೀಕರ್ ಹಿಡಿತದಲ್ಲಿ ಇರಬೇಕಾದ ವಿಧಾನ ಸೌಧ ಪೊಲೀಸ್ ಹಿಡಿತದಲ್ಲಿದೆ.  ರಾಜ್ಯ ಪಾಲರು ತಮ್ಮ ವಿವೇಚನೆಯನ್ನು ಬಳಸಿ ಸರಕಾರವನ್ನು ಅಮಾನತ್ತು ಮಾಡಬೇಕಿತ್ತು,  ಬಹುಮತ ಇರೋ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶ ನೀಡಬೇಕಿತ್ತು, ಮೈತ್ರಿ ಸರಕಾರಕ್ಕೆ ಮುಳುವಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದನ್ನು ಅರಿತು ಸ್ಪೀಕರ್ ಅವರು ಕ್ರಮ ಕೈಗೊಳ್ಳಬೇಕು ತಕ್ಷಣ ಸರಕಾರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು. ಕ್ಯಾಬಿನೆಟ್ ನಡೆಸಲು ಅನುಮತಿ ನೀಡಬಾರದು. ಮೈತ್ರಿ ಸರಕಾರ ಯಾವುದೇ ಬಲ ಇಲ್ಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.