ಮತ್ತೊಮ್ಮೆ ರಿಸೈನ್ ಕೊಡಲು ಓಡೋಡಿ ಬಂದ ಅತೃಪ್ತ ಶಾಸಕರು..!

ಬೆಂಗಳೂರು: ಈ ಮೊದಲು ಕೊಟ್ಟ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲವೆಂದು ಮತ್ತೊಮ್ಮೆ ರಾಜೀನಾಮೆ ನೀಡಲು ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದು, ಓಡಿ ಬಂದು ರಾಜೀನಾಮೆ ಸಲ್ಲಿಸಿದ್ದಾರೆ.

11 ಶಾಸಕರು ತಮ್ಮ ರಾಜೀನಾಮೆಯನ್ನು ಕ್ರಮಬದ್ಧವಾಗಿ ನೀಡಲು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದು, ಬಿಗಿಭದ್ರತೆ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದರು. ನಂತರ ಎಲ್ಲಿ ಕಾಂಗ್ರೆಸ್ ನಾಯಕರು ತಮಗೆ ವಿಪ್ ನೀಡುತ್ತಾರೋ ಎಂದು, ಶಾಸಕರು ಪೊಲೀಸರ ನೇತೃತ್ವದಲ್ಲಿ ಸ್ಪೀಕರ್ ಕಚೇರಿಗೆ ಧಾವಿಸಿ, ರಾಜೀನಾಮೆ ಸಲ್ಲಿಸಿದ್ದಾರೆ.

ಭೈರತಿ ಬಸವರಾಜ್ , ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್ , ಶಿವರಾಮ್ ಹೆಬ್ಬಾರ್ , ಎಸ್. ಟಿ. ಸೋಮಶೇಖರ್ , ನಾರಾಯಣ ಗೌಡ, ಗೋಪಾಲಯ್ಯ, ಹೆಚ್ ವಿಶ್ವನಾಥ್, ಪ್ರತಾಪ್ ಗೌಡ ಪಾಟೀಲ್, ಮುನಿರತ್ನ, ಮಹೇಶ್ ಕುಮಟಳ್ಳಿ ಕೈಬರಹದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.

ಇನ್ನು ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಿದ್ದು, ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ11 ಶಾಸಕರ ರಾಜೀನಾಮೆ ಪತ್ರ ಸ್ವೀಕರಿಸಿದ್ದಾರೆ. ಅಲ್ಲದೇ ರಾಜೀನಾಮೆ ಕುರಿತ ಕಾರಣಗಳ ವಿಚಾರಣೆ ಕೂಡ ನಡೆಸಲಾಯಿತು. ಈ ವೇಳೆ ರಾಜೀನಾಮೆ ಪ್ರಕ್ರಿಯೆ ದೃಶ್ಯಗಳನ್ನು ಚಿತ್ರೀಕರಿಸುವಂತೆ ಸ್ಪೀಕರ್ ಸೂಚನೆ ನೀಡಿದ್ದಾರೆ.

ರಾಜೀನಾಮೆ ಬಲವಾದ ಕಾರಣ ಏನು ಎಂಬ ಕುರಿತು ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕುದುರೆ ವ್ಯಾಪಾರದ ಬಗ್ಗೆಯೂ ಚರ್ಚೆ ನಡೆಯಿತು. ಪ್ರತ್ಯೇಕವಾಗಿ ಆಗಮಿಸಿ ವಿಚಾರಣೆಗೆ ಬರುವಂತೆ ಅತೃಪ್ತ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.