ಸಮ್ಮಿಶ್ರ ಸರ್ಕಾರವನ್ನು ರಾಕ್ಷಸರಿಗೆ ಹೋಲಿಸಿ ಜಗ್ಗೇಶ್ ಟಾಂಗ್..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನವರಸ ನಾಯಕ ಜಗ್ಗೇಶ್, ಸಮ್ಮಿಶ್ರ ಸರ್ಕಾರವನ್ನು ರಾಕ್ಷಸರಿಗೆ ಹೋಲಿಸುವ ಮೂಲಕ ಟಾಂಗ್ ನೀಡಿದ್ದಾರೆ.

ಸಚಿವ ಸ್ಥಾನಕ್ಕಾಗಿ ಶಾಸಕರ ರಾಜೀನಾಮೆ ಹಾವಳಿ, ಪಕ್ಷಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ಯಾದಿಗಳ ಬಗ್ಗೆ ವ್ಯಂಗ್ಯವಾಡಿದ ನಟ ಜಗ್ಗೇಶ್, ಸಮ್ಮಿಶ್ರ ಸರ್ಕಾರವನ್ನ ರಾಕ್ಷಸರಿಗೆ ಹೋಲಿಸಿದ್ದಾರೆ.

ಮನುಜ ಜನ್ಮದಲ್ಲಿ ಎರಡು ಗಣಗಳಿವೆ. ಒಂದು ದೇವಗಣ ಇನ್ನೊಂದು ರಾಕ್ಷಸಗಣ. ಅದರಲ್ಲಿ ರಾಕ್ಷಸಗಣ ಹೆಚ್ಚಾಗಿ ಮನುಷ್ಯ ರೂಪದಲ್ಲಿ ಬರುತ್ತೆ. ಕೆಲವರು ಸತ್ತ ಸೂತಕದ ಮನೆಯವರ ಥರ ಬಾಯ್ಬಡ್ಕೊಂಡು ಅಧಿಕಾರ, ಮಂತ್ರಿಗಿರಿಗಾಗಿ ರಾಕ್ಷಸ ರೂಪದಲ್ಲಿ ವರ್ತಿಸ್ತಾ ಇದ್ದಾರೆ. ರಾಕ್ಷಸರಂತೆ ವರ್ತಿಸುವವರು ಮೇಲಿದ್ದಾರೆ ಅಂತ ಸಮ್ಮಿಶ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

ದೇವರಂತೆ ವರ್ತಿಸಿ ಉತ್ತಮ ಕೆಲಸ ಮಾಡ್ತಾ ಇರೋರು ಕೆಲವರು ಮಾತ್ರ. ಅಂಥವರಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಒಬ್ಬರು. ಜನರಿಗೆ ಬೇಕಾದಂತ ಉತ್ತಮ ಕಾರ್ಯಕ್ರಮಗಳ ನಿರ್ವಹಿಸಿ ದೇವರಿಗೆ ಸಮಾನರಾಗೋರು ಇವರು. ಹಾಗಾಗಿ ಮನುಜನ್ಮದಲ್ಲಿ ಎರಡು ಗಣಗಳಿವೆ ಅಂತ ಹೇಳ್ತಾ ಇದ್ದೀನಿ ಎಂದು ವ್ಯಂಗ್ಯವಾಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.