2019ರ ವಿಶ್ವಕಪ್ನಲ್ಲಿ 'ಹಿಟ್ಮ್ಯಾನ್' ಅಬ್ಬರಕ್ಕೆ ಸೃಷ್ಠಿಯಾದ 5 ವಿಶಿಷ್ಟ ದಾಖಲೆ

ಇಂಗ್ಲೆಂಡ್, ಮ್ಯಾಂಚೆಸ್ಟರ್: ಭಾರತನ ತಂಡದ ಆರಂಭಿಕ ಆಟಗಾರರ ಹಿಟ್ ಮ್ಯಾನ್ ರೋಹಿತ್ ಶರ್ಮಾ 2019ರ ವಿಶ್ವಕಪ್ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಲಂಕಾ ವಿರುದ್ಧ ಮತ್ತೊಂದು ಶತಕವನ್ನು ಗಳಿಸಿ ತಮ್ಮ ತಂಡವು ಅಗ್ರಸ್ಥಾನದಲ್ಲಿ ಇರುವುದು ಖಾತ್ರಿ ಮಾಡಿದರು.
ಈ ಆವೃತ್ತಿಯಲ್ಲಿ ‘ದಿ ಹಿಟ್ಮ್ಯಾನ್’ ಮುರಿದ ದಾಖಲೆಗಳನ್ನು ನೋಟ ಇಲ್ಲಿವೆ..
#1 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕಗಳು
ನಿನ್ನೆಯಷ್ಟೇ ರೋಹಿತ್ ಶರ್ಮಾ ಅವರು ಶ್ರೀಲಂಕಾ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ಜೊತೆಯಲ್ಲಿ ಜಂಟಿ ದಾಖಲೆದಾರರಾಗಿ ನಿಂತಿದ್ದರು - ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಇಬ್ಬರು (ತಲಾ 4) ಆಗಿತ್ತು.
ವಿಪರ್ಯಾಸವೆಂದರೆ, ಸಂಗಕ್ಕಾರ ಅವರ ಸ್ವಂತ ತಂಡದ ವಿರುದ್ಧವೇ ರೋಹಿತ್ 5 ಶತಕ ಸಿಡಿಸುವ ಮೂಲಕ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಹಿಟ್ಮ್ಯಾನ್ ಸೇರ್ಪಡೆಗೊಂಡರು. ಈ ದಾಖಲೆ ಮಾಡಿ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಶರ್ಮಾ ಪಾತ್ರರಾಗಿದ್ದಾರೆ.
#2 ವಿಶ್ವಕಪ್ನ ಲೀಗ್/ಗುಂಪು ಹಂತದಲ್ಲಿ ಹೆಚ್ಚಿನ ರನ್ ದಾಖಲು
ಸದ್ಯ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಸಿಡಿಸಿ ಸಚಿನ್ ತೆಂಡೂಲ್ಕರ್ (673) ಮ್ಯಾಥ್ಯೂ ಹೇಡನ್(659) ಅವರು ಮೊದಲ ಎರಡು ಸ್ಥಾನದಲ್ಲಿ ಇದ್ದಾರೆ. ಹಿಟ್ಮ್ಯಾನ್ ಗ್ರೂಪ್ ಲೀಗ್ನಲ್ಲಿಯೇ ಮೇಲಿರುವವರ ರನ್ಗಳ(647)ಸಮೀಪಕ್ಕೆ ಬಂದು ನಿಂತಿದ್ದಾರೆ. ಇನ್ನು ಈ ವಿಭಾಗದಲ್ಲಿಯೂ ರೋಹಿತ್ ದಾಖಲೆ ಮಾಡೋದು ಖಚಿತವಾಗಿದೆ.
#3, 3 ಸತತ ಮೂರು ವಿಶ್ವಕಪ್ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್
ಯಾರು ಕೂಡ ಈ ಹಿಟ್ಮ್ಯಾನ್ ಹತ್ತಿರ ಬರದೆ ಇರುವಂತ ಮತ್ತೊಂದು ದಾಖಲೆ ಬರೆದಿದ್ದಾರೆ. ಅದು ಸತತ ಮೂರು ಪಂದ್ಯಗಳಲ್ಲಿ ಮೂರು ಶತಕ ಸಿಡಿಸಿಸುವ ಮೂಲಕ ದಾಖಲೆ ಸೃಷ್ಠಿ ಮಾಡಿದ್ದಾರೆ. ಈ ದಾಖಲೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ವಾಸ್ತವವಾಗಿ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತ್ರ ಭಾರತಕ್ಕಾಗಿ ಸತತ ಮೂರು ಶತಕ ಬಾರಿಸಿದ ಆಟಗಾರರಾಗಿದ್ದಾರೆ ಆದರೆ ವಿಶ್ವಕಪ್ ವಿಷಯಕ್ಕೆ ಬಂದರೆ ಶರ್ಮಾ ಬಿಟ್ಟರೇ ಯಾವ ಬ್ಯಾಟ್ಸ್ಮನ್ ಕೂಡ ಈ ದಾಖಲೆ ಮಾಡಿಲ್ಲ.
#4 ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ 5 ವಿಶ್ವಕಪ್ ಶತಕ ಗಳಿಸಿದ ಮೊದಲ ಆಟಗಾರ
ವಿಶ್ವಕಪ್ನಲ್ಲಿ ಹಿಟ್ಮ್ಯಾನ್ ಕ್ರಿಕೆಟ್ನ ನೂರಾರು ಗುಣಮಟ್ಟದ ಆಟಗಾರರು ಇರುವ ಕಡೆ ರೋಹಿತ್ ಶರ್ಮಾ ಅವರ ದಾಖಲೆ ಬರೆದಿರೋದು ಮತ್ತಷ್ಟು ವಿಶೇಷವಾಗಿದೆ. ಟ್್
2003ರ ವಿಶ್ವಕಪ್ ಆವೃತ್ತಿಯಲ್ಲಿ ಆಗಿನ ಟೀಂ ಇಂಡಿಯಾ ನಾಯಕನಾಗಿದ್ದ ಸೌರವ್ ಗಂಗೂಲಿ ಅವರು ನಮೀಬಿಯಾ ಮತ್ತು ಕೀನ್ಯಾ ವಿರುದ್ಧ 2 ಶತಕ ಜೊತೆಗೆ ಆ ಟೂರ್ನಿಯಲ್ಲಿ ಒಟ್ಟು 3 ಶತಗಳು ಅವರ ಬ್ಯಾಟ್ನಿಂದ ದಾಖಲಾಗಿತ್ತು. ಆದರೆ ರೋಹಿತ್ ಶರ್ಮಾ ಅವರು ಟೆಸ್ಟ್ನಲ್ಲಿ ಆಡಲು ಯೋಗ್ಯವಾದ ತಂಡಗಳ ವಿರುದ್ಧ ಶತಕ ಬಾರಿಸಿ ತಮ್ಮ ಭುಜಬಲದಲ್ಲಿ ಇತರರಿಗಿಂತ ಹೆಚ್ಚಾಗಿ ನಿಲ್ಲುತ್ತಾರೆ.
ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಅಂತಿಮವಾಗಿ ಶ್ರೀಲಂಕಾ - ಈ ವಿಶ್ವಕಪ್ ವಿರುದ್ಧ ಅವರು ಶತಕಗಳನ್ನು ಗಳಿಸಿದ್ದಾರೆ ಮೇಲಿನ ಎಲ್ಲ ತಂಡಗಳು ಟೆಸ್ಟ್ ಆಡುವ ರಾಷ್ಟ್ರಗಳಾಗಿವೆ. ಹೀಗಾಗಿ ಈ ಟೂರ್ನಿಯಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್ಮ್ಯಾನ್ ಪಾತ್ರರಾಗಿದ್ದಾರೆ.
#5 ಇಂಗ್ಲೆಂಡ್ನಲ್ಲಿ ಸತತ 3 ಏಕದಿನ ಶತಕಗಳನ್ನು ಗಳಿಸಿದ ಮೊದಲ ಆಟಗಾರ
ಬ್ಯಾಟ್ಸ್ಮನ್ನ ಸಾಮರ್ಥ್ಯದ ನಿಜವಾದ ಪರೀಕ್ಷೆ ಎಂದು ಹೆಸರಿಸಲ್ಪಟ್ಟ ರೋಹಿತ್ ಶರ್ಮಾ, ವಿಶ್ವಕಪ್ನ ಈ ಆವೃತ್ತಿಯಲ್ಲಿ ಇಂಗ್ಲಿಷ್ ಪರಿಸ್ಥಿತಿಗಳನ್ನು ಚೆನ್ನಾಗಿ ಮತ್ತು ನಿಜವಾಗಿಯೂ ಕರಗತ ಮಾಡಿಕೊಂಡಿದ್ದಾರೆ ಎಂದು ಹೇಳಿಕೊಳ್ಳಬಹುದು.
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಆಡಿದ ಆಟ ಎಲ್ಲರ ಮನಸ್ಸಿನಲ್ಲಿ ಉಳಿದಿದೆ. ಅಲ್ಲದೇ ವಿರಾಟ್ ಆಂಗ್ಲರ ನೆಲೆ ಬಗ್ಗೆ ಸಾಕಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದರು ಸಹ. ಒಬ್ಬ ಭಾರತೀಯ ಆಟಗಾರರ ಈ ರೀತಿ ಅಲ್ಲಿ ಪರಿಸ್ಥಿತಿಯನ್ನು ಅರಿತುಕೊಂಡು ಸ್ಥಳೀಯ ತಂಡಗಳ ವಿರುದ್ಧ ಪ್ರಾಬಲ್ಯ ಸಾಧಿಸುವುದು ಖಂಡಿತವಾಗಿಯೂ ಒಂದು ಅಭೂತಪೂರ್ವ ಕಾರ್ಯವಾಗಿದೆ.
ಶ್ರೀಲಂಕಾ ವಿರುದ್ಧದ ಶತಕದೊಂದಿಗೆ, ರೋಹಿತ್ ಶರ್ಮಾ ಇಂಗ್ಲೆಂಡ್ನಲ್ಲಿ ಸತತ 3 ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿಜಕ್ಕೂ ಹಿಟ್ಮ್ಯಾನ್ ಮಾಡಿದ ಈ ದಾಖಲೆ ದೇವರಿಗೆ ಪ್ರಿಯವಾದುದ್ದು ಅಂತನೇ ಹೇಳಬಹುದು.