Top

ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ರಾಮಲಿಂಗಾರೆಡ್ಡಿ, ಮುನಿರತ್ನ ಹೇಳಿದ್ದೇನು..!?

ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ರಾಮಲಿಂಗಾರೆಡ್ಡಿ, ಮುನಿರತ್ನ ಹೇಳಿದ್ದೇನು..!?
X

ಬೆಂಗಳೂರು: ನಾನು ಏಕಾಂಗಿ, ಕೊಟ್ಟ ರಾಜೀನಾಮೆ ವಾಪಸ್ ಪಡೆಯಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬಿಜೆಪಿ ಹೋಗಲ್ಲ ಕಾಂಗ್ರೆಸ್ ಬಿಡಲ್ಲ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಮಾತನಾಡಿದ ಅವರು, ರಾಜೀನಾಮೆ ವಾಪಸ್ ಪಡೆಯುವ ಮಾತೇ ಇಲ್ಲ, ನನ್ನ ರಾಜೀನಾಮೆ ಕಾರಣ ಮಾಧ್ಯಮದವರಿಗೆ ಗೊತ್ತು ಎಂದರು.

ರಮೇಶ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿಲ್ಲ

ಸೌಮ್ಯ ರೆಡ್ಡಿ ರಾಜೀನಾಮೆ ವಿಚಾರವಾಗಿ ಅವರನ್ನೇ ಕೇಳಿ ಎಂದರು, ನಾನು ಬಿಜೆಪಿಗೆ ಹೋಗಲ್ಲ, ಅತೃಪ್ತರ ಜೊತೆಯಾಗಲಿ. ರಮೇಶ ಜಾರಕಿಹೊಳಿ ಜೊತೆಗಿರೋ ಶಾಸಕರ ಜೊತೆ ಗುರುತಿಸಿಕೊಂಡಿಲ್ಲ, ಬಿಜೆಪಿ ಹೋಗಲ್ಲ ಕಾಂಗ್ರೆಸ್ ಬಿಡಲ್ಲ ಎಂದು ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದರು.

ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಈ ನಿರ್ಧಾರ

ನಂತರ ವಿಧಾನಸೌಧದಲ್ಲಿ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ನಾವು ಐದು ಶಾಸಕರು ಒಗ್ಗಟ್ಟಾಗಿದ್ದೇವೆ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಮಲಿಂಗಾರೆಡ್ಡಿ ಹಲವಾರು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ನಾವು ನಿರ್ಧಾರ ಮಾಡಿದ್ದೇವೆ. ನಮ್ಮ ನಿರ್ಧಾರ ಬದಲಾಗಲ್ಲ ಎಂದರು.

Next Story

RELATED STORIES