Top

27 ವರ್ಷದ ಬಳಿಕ ಸಚಿನ್​ ತೆಂಡೂಲ್ಕರ್​ ದಾಖಲೆ ಉಡೀಸ್ ಮಾಡಿದ ಅಫ್ಘಾನ್​ ಕ್ರಿಕೆಟಿಗ

27 ವರ್ಷದ ಬಳಿಕ ಸಚಿನ್​ ತೆಂಡೂಲ್ಕರ್​ ದಾಖಲೆ ಉಡೀಸ್ ಮಾಡಿದ ಅಫ್ಘಾನ್​ ಕ್ರಿಕೆಟಿಗ
X

ಲಂಡನ್​: ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019ರ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ತಂಡ ವೆಸ್ಟ್​ ಇಂಡೀಸ್​ ವಿರುದ್ಧ ಸೋಲುವ ಮೂಲಕ ಆಡಿದ ಒಟ್ಟು ಒಂಬತ್ತು ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಸೋತಿದೆ. ವೆಸ್ಟ್​​ ಇಂಡೀಸ್​ ಕೊನೆ ಪಂದ್ಯವನ್ನು ಗೆಲ್ಲುವ ಮೂಲಕ ಈ ವಿಶ್ವಕಪ್​ನಿಂದ ಹೊರ ನಡೆದಿದೆ.

ಅಫ್ಘಾನಿಸ್ತಾನ ವಿಕೆಟ್​ ಕೀಪರ್ ಇಕ್ರಮ್ ಅಲಿ ಖಿಲ್ ತಮ್ಮ ಹಿಂದಿನ ಪಂದ್ಯದಲ್ಲಿ 23ರನ್​ಗಳ ಗಳಿಸಿ ಔಟ್​ ಆಗಿದ್ದರು. ಸದ್ಯ ಇವರು 18 ವರ್ಷದ ವಯಸ್ಸಿನವರಾಗಿದ್ದಾರೆ. ನಿನ್ನೆ ನಡೆದ ವಿಂಡೀಸ್​ ವಿರುದ್ಧ ಪಂದ್ಯದಲ್ಲಿ 81ರನ್​ಗಳನ್ನು ಬಾರಿಸುವ ಮೂಲಕ 27 ವರ್ಷಗಳ ಹಿಂದೆ ಮಾಡಿದ್ದ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

https://platform.twitter.com/widgets.js

ಹಿಂದಿನ ಪಂದ್ಯದಲ್ಲಿ ​ಇಕ್ರಮ್ ಅಲಿ ಖಿಲ್ ಕ್ರೀಸ್​ ಗೇಲ್​ ಮಾಡಿದ ಬೌಲಿಂಗ್​ಗೆ ಬಹುಬೇಗ ವಿಕೆಟ್​ ಒಪ್ಪಿಸಿ ನಿರ್ಮಿಸಿದ್ದರು. ಅಷ್ಟೇ ಅಲ್ಲದೇ ಇದಕ್ಕಿಂತ ಮುಂಚೆ ಸಚಿವ ತೆಂಡೂಲ್ಕರ್​ ದಾಖಲೆ ಬ್ರೇಕ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಯುವ ಪ್ರತಿಭೆಗೆ ಈಗ 18 ವರ್ಷ 278ದಿನಗಳು ಆಗಿದ್ದು 80ಕ್ಕೂ ಹೆಚ್ಚು ಬಾರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಇದಕ್ಕಿಂತ ಮುಂಚಿನ ದಾಖಲೆ ಭಾರತದ ಕ್ರಿಕೆಟ್​ ದೇವರು 1992ರಲ್ಲಿ ಜಿಂಬಾಂಬೆ ವಿರುದ್ಧ ಆಡುವಾಗ 81ರನ್​ ಬಾರಿಸಿದ್ದು ಇಲ್ಲಿವರೆಗಿನ ದಾಖಲೆಯಾಗಿತ್ತು. ಆಗ ಸಚಿನ್​ ಅವರಿಗೆ 18 ವರ್ಷ 318 ದಿನಗಳು ಆಗಿದ್ದವು.

Next Story

RELATED STORIES