Top

ವೀರಶೈವ ಮುಖಂಡರಿಗೆ ಎಚ್ಚರಿಕೆ ನೀಡಿದ ಜಾಮದಾರ್..!

ವೀರಶೈವ ಮುಖಂಡರಿಗೆ ಎಚ್ಚರಿಕೆ ನೀಡಿದ ಜಾಮದಾರ್..!
X

ಬೆಂಗಳೂರು: ವೀರಶೈವ ಅನ್ನುವುದು ಲಿಂಗಾಯತ ಧರ್ಮದ ಭಾಗವಾಗಿದೆ ಪಂಚಪೀಠಗಳೇ ಒಪ್ಪಿಕೊಂಡಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಶೈವರು ಉಪಪಂಗಡವಾಗಿ ಲಿಂಗಾಯತದಲ್ಲಿ ಇರಲಿ ಆದರೆ ತಮ್ಮದೇ ಧರ್ಮ ಅಂತ ವಾದಿಸುವುದು ಬೇಡ. ೧೨೦ ವರ್ಷಗಳಿಂದ ಈ ವಿಚಾರವಾಗಿ ಬೆಂಕಿ ಉರಿಯುತ್ತಿದೆ. ವೀರಶೈವ ವೇದಿಕೆ ಈ ಗೊಂದಲ ಹುಟ್ಟಿಸುತ್ತಿದೆ. ಗೊಂದಲ ಸೃಷ್ಟಿಸಿ ನಮಗೆ ಪ್ರತ್ಯೇಕ ಧರ್ಮ ಕೊಡಿ ಅಂದರೆ ಹೇಗೆ(?) ಲಿಂಗಾಯತ ಧರ್ಮದಲ್ಲಿ ವೀರಶೈವ ಉಪಪಂಗಡವಾಗಿರಲಿ ಎಂದು ಅವರು ತಿಳಿಸಿದರು.

ಇನ್ನು ಉಪಪಂಗಡವಾಗಿರೋದಕ್ಕೆ ನಮ್ಮ ಅಭ್ಯಂತರವಿಲ್ಲ. ಈ ವಿಚಾರದಲ್ಲಿ ನಾವು ಸುಪ್ರೀಂಕೋರ್ಟ್​​ಗೆ ಹೋಗುತ್ತೇವೆ. ಅವರು ತಪ್ಪು ಬೇಡಿಕೆ ಇಟ್ಟರೇ ನಾವು ಒಪ್ಪಲ್ಲ. ಹಿಂದುಳಿದ ಸ್ಥಾನಮಾನ ನೀವು ಪಡೆಯಿರಿ ಆದರೆ ಲಿಂಗಾಯತ ಧರ್ಮದ ಅಡಿಯಲ್ಲಿ ಪಡೆಯಿರಿ. ವೀರಶೈವ ಧರ್ಮ ಅಂತ ಹೋಗ ಬೇಡಿ ಎಂದು ಬೆಂಗಳೂರಿನಲ್ಲಿ ವೀರಶೈವ ಮುಖಂಡರಿಗೆ ಜಾಮದಾರ್ ಎಚ್ಚರಿಕೆ ಮಾತುಗಳನ್ನು ಆಡಿದರು.

Next Story

RELATED STORIES