'ಪಾಕಿಸ್ತಾನ ವಿರುದ್ಧ ಟೀ ಇಂಡಿಯಾ ಬೃಹತ್ ಮೊತ್ತ'- ರೋಹಿತ್ ಭರ್ಜರಿ ಶತಕ

ಇಂಗ್ಲೆಂಡ್, ಮ್ಯಾಂಚೆಸ್ಟರ್ : ಭಾರತ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಭಾನುವಾರ ಇಂಗ್ಲೆಂಡ್ ಮ್ಯಾಂಚೆಸ್ಟರ್ ಅಂಗಳದಲ್ಲಿ ನಡೆಯುತ್ತಿದ್ದು ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತ್ತು.
ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಮೆನ್ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಜೊತೆಗೂಡಿ 131ರನ್ಗಳು ಕಲೆಹಾಕಿದರು. ರಾಹುಲ್ 78 ಎಸೆತ ಎದುರಿಸಿ ಎರಡು ಭರ್ಜರಿ ಸಿಕ್ಸರ್, ಮೂರು ಬೌಂಡರಿ ಸಹಿತ 57ರನ್ಗಳನ್ನು ಸಿಡಿಸಿ 23.5ನೇ ವಹಾಬ್ ರಿಯಾಜ್ ಎಸೆದ ಬಾಲ್ಗೆ ಅವರು ಔಟ್ ಆಗಿ ನಿರ್ಗಮಿಸಿದರು.
ಬಳಿಕ ರೋಹಿತ್ ಶರ್ಮಾ ಅವರಿಗೆ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸಾಥ್ ಕೊಟ್ಟರು. ಶರ್ಮಾ ಅವರು ಅದ್ಭುತ ಇನ್ನಿಂಗ್ ಕಟ್ಟಿ ಭರ್ಜರಿ ಶತಕ ದಾಖಲಿಸುವ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ನಾಂದಿ ಹಾಕಿದರು. ಶರ್ಮಾ 113 ಎಸೆತಗಳನ್ನು ಎದುರಿಸಿ ಮೂರು ಸಿಕ್ಸರ್, 14 ಬೌಂಡರಿ ಬಾರಿಸುವ ಮೂಲಕ ವೈಯಕ್ತಿಕ ಮೊತ್ತ 140ರನ್ ದಾಖಲಿಸಿ ತಂಡದ ಮೊತ್ತ 234ರನ್ ಆಗಿದ್ದಾಗ ಹಸನ್ ಅಲಿ ಅವರ ಎಸೆತಕ್ಕೆ ಬಲಿಯಾಗಿ ಪೆವಿಲಿಯನ್ ಸೇರಿದರು.
ವಿರಾಟ್ ಕೊಹ್ಲಿಗೆ ಸಾಥ್ ಕೊಟ್ಟ ಹಾರ್ಧಿಕ್ ಪಾಂಡ್ಯೆ 19 ಎಸೆತ ಎದುರಿಸಿ 26ರನ್ಗಳು ಸಿಡಿಸಿ ಅಮಿರ್ ಅವರು ಎಸೆದ ಬಾಲ್ಅನ್ನು ಭರ್ಜರಿ ಹೊಡೆತಕ್ಕೆ ಮುಂದಾದಗ ಹೊಡೆತ ವಿಫಲವಾಗಿ ಲಾಂಗ್ ಲೈನ್ಗೆ ಕ್ಯಾಚ್ ಕೊಟ್ಟು ಔಟ್ ಆದರು.
ಇನ್ನು ಮಹೇಂದ್ರ ಸಿಂಗ್ ಧೋನಿ ಅವರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯದೇ ಒಂದು ರನ್ ಗಳಿಸಿ ಔಟ್ ಆದರು. ವಿರಾಟ್ ಅವರು 62 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಸಹಿತ 71ರನ್ಗಳನ್ನು ಸಿಡಿಸಿ ಔಟ್ ಆಗದೆ ಕ್ರೀಸ್ನಲ್ಲಿ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿಗೆ ವಿಜಯ ಶಂಕರ್ ಅವರು ಸಾಥ್ ನೀಡುತ್ತಿದ್ದಾರೆ.
ಸದ್ಯ ಭಾರತ ತಂಡ 46. 4 ಓವರ್ ಎದುರಿಸಿ ನಾಲ್ಕು ವಿಕೆಟ್ ನಷ್ಟಕ್ಕೆ 305ರನ್ಗಳನ್ನು ಕಲೆಹಾಕಿ ಬ್ಯಾಟ್ ಮುಂದುವರೆಸಿದೆ. ಮ್ಯಾಂಚೆಸ್ಟರ್ನಲ್ಲಿ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತ ಮಾಡಲಾಗಿದೆ.