ರಾಬರ್ಟ್ ಚಿತ್ರದಲ್ಲಿ ದರ್ಶನ್ ಮತ್ತು ವಿನೋದ್ ಪ್ರಭಾಕರ್..!

X
TV5 Kannada13 Jun 2019 3:16 PM GMT
ಬೆಂಗಳೂರು: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯದ 53ನೇ ರಾಬರ್ಟ್ ಸಿನಿಮಾದ ಫೋಟೊ ಲೀಕ್ ಆಗಿದೆ. ಪೋಟೋದಲ್ಲಿ ಡಿ-ಬಾಸ್ ಜೊತೆ ಮರಿ ಟೈಗರ್ ವಿನೋದ್ ಪ್ರಭಾಕರ್ ಕೂಡ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಚಿತ್ರರಸಿಕರಲ್ಲಿ ಸಖತ್ ಕುತೂಹಲ ಮೂಡಿಸಿದೆ.
ತರುಣ್ ಸುಧೀರ್ ಅವರ ನಿರ್ದೇಶನದ ಆ್ಯಕ್ಷನ್ ಎಂಟ್ರಟ್ರೈನರ್ ಚಿತ್ರ ಇದ್ದಾಗಿದೆ. ತರುಣ್ ಸುಧೀರ್ ಅವರಿಗೆ ಇದು 2ನೇ ಚಿತ್ರವಾಗಿದ್ದು ಮೊದಲನೇ ಚಿತ್ರ ಚೌಕ ಸ್ಯಾಂಡಲ್ವುಡ್ನಲ್ಲಿ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿತ್ತು.
ಪೋಟೋನಲ್ಲಿ ಇಬ್ಬರು ನಟರು ಬಹಳ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಅಭಿಮಾನಿಗಳಿಗೆ ಫುಲ್ ಥ್ರೀಲ್ ಕೊಟ್ಟಿತ್ತು. ಇನ್ನು ಈ ಚಿತ್ರಕ್ಕೆ ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಅವರು ನಿರ್ಮಾಪಕರಾಗಿದ್ದಾರೆ.
Next Story