ರಣ್ವೀರ್ ವರ್ಲ್ಡ್​​​ ಕಪ್.. ದೀಪಿಕಾ ಚಿಯರ್ಸ್…!?

1983ರಲ್ಲಿ ಕಪಿಲ್ ದೇವ್ ನೇತೃತ್ವದ ಇಂಡಿಯನ್ ಕ್ರಿಕೆಟ್ ಟೀಮ್ ವರ್ಲ್ಡ್ ಕಪ್ ಗೆದ್ದಿದ್ದು ಗೊತ್ತೇಯಿದೆ. ಈ ಅದ್ಭುತ ಸಾಧನೆಯ ರೋಚಕ ಕಥೆಯನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ತರೋ ಸಾಹಸಕ್ಕೆ ಕಬೀರ್​ ಖಾನ್ ಮತ್ತು ರಣ್ವೀರ್ ಸಿಂಗ್ ಕೈ ಹಾಕಿದ್ದಾರೆ.

ಈಗಾಗಲೇ ಸದ್ದಿಲ್ಲದೇ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್​ ಸ್ಟಾರ್ಟ್ ಆಗಿದ್ದು, ರಣ್ವೀರ್​ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಬಣ್ಣ ಹಚ್ತಿದ್ದಾರೆ. 1983ರಲ್ಲಿ ಅಂಡರ್ ಡಾಗ್ಸ್ ಹಣೆಪಟ್ಟಿಯೊಂದಿಗೆ ಇಂಗ್ಲೆಂಡ್​​​​​​ಗೆ ಅಡಿ ಇಟ್ಟಿದ್ದ ಭಾರತ ಕ್ರಿಕೆಟ್​ ತಂಡ, ಎಲ್ಲರ ನಿರೀಕ್ಷೆ ಮೀರಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಅದರಲ್ಲೂ ಫೈನಲ್​ನಲ್ಲಿ ಬಲಾಡ್ಯ ವೆಸ್ಟ್ ಇಂಡೀಸ್ ತಂಡದ ಎದುರಿನ ಮ್ಯಾಚ್​ ಸಿಕ್ಕಾಪಟ್ಟೆ ರೋಚಕವಾಗಿತ್ತು. ತಂಡದ ನಾಯಕ ಕಪಿಲ್ ದೇವ್ ಸರಣಿಯುದ್ದಕ್ಕೂ ಆಲ್​ರೌಂಡ್ ಪ್ರದರ್ಶನದ ಮೂಲಕ ತಂಡಕ್ಕೆ ವಿಜಯಮಾಲೆ ತಂದಿದರು.

ಈ ರೋಚಕ ಕ್ಷಣಗಳನ್ನು ‘83’ ಚಿತ್ರದಲ್ಲಿ ರೀಕ್ರಿಯೇಟ್ ಮಾಡಲಾಗ್ತಿದೆ. ಈ ಸರಣಿಗೆ ತಂಡ ನಡೆಸಿದ ತಯಾರಿ, ಹೋರಾಟ, ಗೆಲುವು ಎಲ್ಲವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗ್ತಿದೆ. ರಣ್ವೀರ್ ಸಿಂಗ್ ಕಪಿಲ್ ದೇವ್ ಆದರೆ, ತಂಡದ ಇತರೆ ಆಟಗಾರರ ಪಾತ್ರಗಳನ್ನು ತಾಹಿರ್ ರಾಜ್ ಬಸಿನ್, ಸಾಕಿಬ್ ಸಲೀಂ, ಜೀವಾ, ಚಿರಾಗ್ ಪಟೇಲ್ ಮೊದಲಾದವರು ತುಂಬುತ್ತಿದ್ದಾರೆ. 83 ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

ಮದುವೆ ನಂತರ ದೀಪ್​ವೀರ್ ಜೋಡಿ ಈ ಚಿತ್ರದಲ್ಲಿ ಸತಿಪತಿಯಾಗಿಯೇ ಬಣ್ಣ ಹಚ್ತಿದ್ದಾರೆ. ಕಪಿಲ್ ದೇವ್ ಮಡದಿ ರೋಮಿ ಬಾಟಿಯಾ ಪಾತ್ರದಲ್ಲಿ ದೀಪಿಕಾ ನಟಿಸ್ತಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಭಾರತ ತಂಡ, ವರ್ಲ್ಡ್​ ಕಪ್ ಗೆದ್ದಾಗ ಅದಕ್ಕೆ ಆಟಗಾರರ ಮಡದಿಯರು ಆ ಸಾಧನೆಗೆ ಬೆನ್ನುಲುಬಾಗಿ ನಿಂತಿದರು. ಕಪಿಲ್ ದೇವ್ ಮಡದಿ ರೋಮಿ ಭಾಟಿಯಾ ಕೂಡ ಕಪಿಲ್ ದೇವ್ ಸಕ್ಸಸ್​ಗೆ ಪ್ರಾರ್ಥನೆ ಮಾಡಿದರು. ಪತಿಗೆ ಬೆಂಬಲವಾಗಿ ನಿಂತಿದರು. ಹಾಗಾಗಿ ರೋಮಿ ಭಾಟಿಯಾ ಪಾತ್ರವನ್ನ ಪಾತ್ರವನ್ನು ಚಿತ್ರದಲ್ಲಿ ಎಲಿವೇಟ್ ಮಾಡ್ತಿದ್ದು, ದೀಪಿಕಾ ಪಡುಕೋಣೆ ಆ ಪಾತ್ರವನ್ನು ನಿಭಾಯಿಸ್ತಿರೋದು ವಿಶೇಷವಾಗಿದೆ.

ರಾಮ್​ ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ದೀಪ್​ವೀರ್ ಜೋಡಿ ಇದೀಗ 83 ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ನಟಿಸ್ತಿದ್ದಾರೆ. ಮದುವೆ ನಂತರ ಇಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸ್ತಿರೋದು ಮತ್ತೊಂದು ವಿಶೇಷ. ಕಬಿರ್ ಖಾನ್ ನಿರ್ದೇಶನದ ಸ್ಪೋಟ್ಸ್ ಡ್ರಾಮಾ 83 ಮುಂದಿನ ವರ್ಷ ಏಪ್ರಿಲ್ 10ಕ್ಕೆ ಹಿಂದಿ, ತೆಲುಗು, ತಮಿಳಿನಲ್ಲಿ ತೆರೆಗಪ್ಪಳಿಸ್ತಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.