ಶೇ. 90 ರಷ್ಟು ಬಡವರು ಇದ್ದಾರೆ ಅನ್ನೋದು ನಿಜವೇ ? ಇದನ್ನು ಒಪ್ಪಲು ಸಾಧ್ಯವೇ?

ಬೆಂಗಳೂರು : ಶೇ. 90 ರಷ್ಟು ಬಡವರು ಇದ್ದಾರೆ ಅನ್ನೋದು ನಿಜವೇ ? ನಾವು ಇದನ್ನು ಒಪ್ಪಲು ಸಾಧ್ಯವೇ? ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ನಮ್ಮ ರಾಜ್ಯ ಪ್ರಗತಿಪರ ರಾಜ್ಯ 

ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬುಧವಾರ ಮಾತನಾಡಿದ ಅವರು, ನಮ್ಮ ರಾಜ್ಯ ಪ್ರಗತಿಶೀಲ ರಾಜ್ಯ, ಐಟಿ – ಬಿಟಿ ಕ್ಯಾಪಿಟಲ್ ಎಂದು ಪ್ರಸಿದ್ಧಿ ಪಡೆದಿದೆ. ಇಂತಹ ಸಮೃದ್ಧ ರಾಜ್ಯದಲ್ಲಿ 90 ರಷ್ಟು ಬಿಪಿಎಲ್ ಕಾರ್ಡ್ ದಾರರು ಇದ್ದಾರೆ ಎಂದರೇ ನಾವು ಇದನ್ನು ಒಪ್ಪಲು ಸಾಧ್ಯವೇ? ಬಡವರು ಇದ್ದಾರೆ ಅನ್ನೋದು ನಿಜವೇ ಇದರ ಬಗ್ಗೆ ಮರುಪರಿಶೀಲನೆ ನಡೆಸಬೇಕಿದೆ ಎಂದು ಪರಮೇಶ್ವರ್ ಹೇಳಿದರು.

ನಮ್ಮ ಸರ್ಕಾರ ಸುಭದ್ರವಾಗಿದೆ – ಪರಮೇಶ್ವರ್ 

ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಬಿದ್ದುಹೋಗುತ್ತದೆ ಎನ್ನುವ ಕಲ್ಪನೆ ಬೇಡ, ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಗೊಬ್ಬರ ಕೇಳಿದವರ ಮೇಲೆ ಗೋಲಿಬಾರ್ ನಡೆದಿತ್ತು – ಡಾ . ಜಿ ಪರಮೇಶ್ವರ್ 

ರಾಜ್ಯದಲ್ಲಿ ಮಳೆಯ ಕೊರತೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿಯನ್ನು ನೀಡಿದೆ. ರಾಜಸ್ಥಾನ ಬಿಟ್ಟರೇ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಒಣಭೂಮಿ ಇದೆ. ಮುಂಗಾರು ಮಳೆ ಈಗ ಆರಂಭವಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗಬಾರದು. ಈ ಹಿಂದೆ ಗೊಬ್ಬರ ಕೇಳಿದವರ ಮೇಲೆಯೇ ಗೋಲಿಬಾರ್ ನಡೆದಿತ್ತು ಅಂತಹ ದುರ್ಘಟನೆ ಮತ್ತೇ ರಾಜ್ಯದಲ್ಲಿ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.