‘ಬೆಳ್ಳಂಬೆಳಿಗ್ಗೆ ಭ್ರದತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ’

ಜಮ್ಮು- ಕಾಶ್ಮೀರಾ: ಷೋಪಿಯನ್‌ ಜಿಲ್ಲೆಯ ಮೊಲು–ಚಿತ್ರಗಾಂ ಪ್ರದೇಶದಲ್ಲಿಂದು ಬೆಳ್ಳಂಬೆಳಿಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಉಗ್ರ ಹತ್ಯೆಯಾಗಿದ್ದಾನೆ.

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಭದ್ರತಾ ಪಡೆಯ ಯೋಧರು ಉಗ್ರರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿರುದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

https://platform.twitter.com/widgets.js
ನೂತನ ಕೇಂದ್ರ ಸರ್ಕಾರದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ಕಾಶ್ಮೀರದ ಲಡಾಕ್‌ ಮತ್ತು ಸಿಯಾಚಿನ್‌ಗೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಕೆಲವೇ ಗಂಟೆಗಳ ಮೊದಲು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ರಾಜನಾಥ್‌ ಅವರು ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ, ಸೇನಾ ಶಿಬಿರದಲ್ಲಿ ಯೋಧರ ಜತೆ ಸಂವಾದ ನಡೆಸಲಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.