Top

ಸೋತವರ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮ - ಗೆದ್ದವರಿಗೆ ಚಪ್ಪಲಿ, ಪೊರಕೆ ಪ್ರದರ್ಶನ

ಸೋತವರ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮ - ಗೆದ್ದವರಿಗೆ ಚಪ್ಪಲಿ, ಪೊರಕೆ ಪ್ರದರ್ಶನ
X

ಚಾಮರಾಜನಗರ: ಇಂದು ಪಟ್ಟಣ ಪಂಚಾಯ್ತಿ ಚುನಾವನೆ ಫಲಿತಾಂಶ ಪ್ರಕಟವಾಗಿದೆ ಗೆದ್ದವರು ಸಂಭ್ರಮ ಒಂದು ಕಡೆಯಾದರೆ ಸೋತವರು ಮುಖ ತೋರಿಸಲಾಗದಷ್ಟು ಸಂಕಟವಾಗಿರುತ್ತದೆ.

ಚಾಮರಾಜಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕೂಡ ಇಂತಹದೇ ಒಂದು ಘಟನೆ ಗುಂಡ್ಲುಪೇಟೆ ವಾರ್ಡ್​ 8ರಲ್ಲಿ ನಡೆದಿದೆ. ಸೋತ ಅಭ್ಯರ್ಥಿ ಮನೆ ಮುಂದೆ ಗೆದ್ದ ಅಭ್ಯರ್ಥಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ನಾರಾಯಣ ಸ್ವಾಮಿ ಅವರ ಮನೆ ಮುಂದೆ ಗೆದ್ದ ಪಕ್ಷೇತರ ಅಭ್ಯರ್ಥಿ ಶಶಿಧರ್ ದೀಪು ಬೆಂಬಲಿಗರ ನಡುವೆ ಜಗಳ ನಡೆದು ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಇಬ್ಬರು ಕೈ - ಕೈ ಮಿಲಾಯಿಸು ಮಟ್ಟಕ್ಕೆ ಹೋಗಿದ್ದಾರೆ. ನಮ್ಮ ಮನೆ ಮುಂದೆ ಪಟಾಕಿ ಏಕೆ ಹೊಡೆಯುತ್ತೀರೆಂದು ಜಗಳ ತಗೆದ ನಾರಾಯಣ ಸ್ವಾಮಿ ಕುಟುಂಬದವರು. ಇದು ಮಾತಿಗೆ ಮಾತು ಬೆಳೆದು ಚಪ್ಪಲಿ ಮತ್ತು ಪೊರಕೆ ಬಳಕೆ ಮಾಡಿಕೊಂಡು ಜಗಳ ಮಾಡಿದ್ದಾರೆ.

ಸದ್ಯ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಪಟ್ಟಣ ಪೋಲೀಸರ ಭೇಟಿ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.

Next Story

RELATED STORIES