ಚುನಾವಣೆ ಸಮೀಕ್ಷೆ ಬಗ್ಗೆ ಬಿ.ಎಸ್.ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬಂದಿರುವ ಕಾರಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾವು 300 ಸೀಟು ಗೆಲ್ತೇವೆ ಅಂತ ಪ್ರಧಾನಿ ಹೇಳಿದ್ದರು. ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ತೇವೆ. ಮೋದಿಯವರು ಪ್ರಧಾನಿ ಆಗುವುದು ನಿಶ್ಚಿತ. ರಾಜ್ಯದಲ್ಲಿ 22 ಸೀಟು ಗೆಲ್ಲೋದು ನಿಶ್ಚಿತ. ಎಲ್ಲ ಸಮೀಕ್ಷೆಗಳಲ್ಲಿಯೂ ಇದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಮೊದಲಿಗೆ ರಾಜ್ಯದಲ್ಲಿ 22 ಸೀಟು ಗೆಲ್ತೇವೆ ಅಂತ ನಂಬಿರಲಿಲ್ಲ. ನಮ್ಮ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಎರಡು ಉಪಚುನಾವಣೆಯಲ್ಲೂ ನಾವು ಗೆಲ್ತೇವೆ.10 ಸಾವಿರ ಮತಗಳ ಅಂತರದಿಂದ ಗೆಲ್ತೇವೆ. ಮೇ 23ರಂದು ವಾಸ್ತವಿಕ ಸತ್ಯ ಎಲ್ಲರಿಗೂ ಗೊತ್ತಾಗಲಿದೆ. ರಾಜ್ಯದಲ್ಲಿ 2 ಉಪಚುನಾವಣೆ ನಾವು ಗೆಲ್ತೇವೆ ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಇವಿಎಮ್ ಮಷಿನ್‌ನಲ್ಲೇ ದೋಷವಿದೆ ಎಂದು ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಯಾರಿಗೆ ಚುನಾವಣೆ ಸೋಲು ಒಪ್ಪಿಕೊಳ್ಳೋಕೆ ಆಗಲ್ಲ. ಅವರು ಇಂಥ ಮಾತನ್ನ ಹೇಳ್ತಾರೆ. ಮಮತಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಮಿತ್ ಶಾ ಗೂ ಭದ್ರತೆಯನ್ನ ನೀಡಿರಲಿಲ್ಲ. ಹತಾಶರಾಗಿ ಅವರು ಇಂಥ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.