ಲೋಕಸಭೆ ಚುನಾವಣಾ ರಿಸಲ್ಟ್ ಬಗ್ಗೆ ರಾಕಿಂಗ್ ಸ್ಟಾರ್ ಮೊದಲ ಮಾತು

ಮಂಡ್ಯ: ಲೋಕಸಭೆ ಚುನಾವಣೆ ಬಳಿಕ ಪ್ರಥಮ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮದ ಅಭಿಮಾನಿಯೊಬ್ಬರ ಗೃಹಪ್ರವೇಶಕ್ಕೆ ಆಗಮಿಸಿದ ಯಶ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.

ಮದ್ದೂರಿನ ಕೊಪ್ಪ ಸರ್ಕಲ್ ಮತ್ತು ಕೆರೆಮೇಗಲದೊಡ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.

ಇನ್ನು ಎಲೆಕ್ಷನ್ ರಿಸಲ್ಟ್ ಬಗ್ಗೆ ಮೊದಲ ಬಾರಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಮಂಡ್ಯ ರಿಸಲ್ಟ್ ಬಗ್ಗೆ ನಾವು ಪಾಸಿಟಿವ್ ಆಗಿದ್ದೀವಿ. ಎಲ್ಲೆಡೆ ಪಾಸಿಟಿವ್ ವೈಬ್ಸ್ ಇದೆ.  ಸುಮಲತಾ ಅಕ್ಕಾ ಸೋಲಲಿ ಗೆಲ್ಲಲಿ ನಾವು ಅವರ ಪರ ಇರುತ್ತೇವೆ ಎಂದು ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *