‘ಈಶ್ವರಪ್ಪ ಅವರಿಗೆ ನರ ಯಾವುದು ಗಂಡಸ್ತಾನ ಯಾವುದು ಗೊತ್ತಿಲ್ಲ’ – ಡಿ.ಕೆ ಸುರೇಶ್

ಹುಬ್ಬಳ್ಳಿ: ಈಶ್ವರಪ್ಪವರಿಗೆ ನರ ಯಾವುದು ಗಂಡಸ್ತಾನ ಯಾವುದು ಗೊತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್ ಈಶ್ವರಪ್ಪಗೆ ತೀರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯ ಖಾಸಗೀ ಹೋಟೆಲ್​​ವೊಂದರಲ್ಲಿ ಬುಧುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಯಾವುತ್ತು ಒಳ್ಳೆಯದು ಮಾತನಾಡಿಲ್ಲ, ಅವರಿಗೆ ಮೆದುಳು ಸರಿಯಿಲ್ಲ, ಸಿದ್ದರಾಮಯ್ಯ ಹೇಳಿದಂತೆ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಿರುದ್ಧ ಗುಡುಗಿದ್ದಾರೆ.

ಪ್ರಜಾ ಪ್ರತಿನಿಧಿಗಳಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ. ನಮಗೆ ಚುನಾವಣೆಯ ಗೆಲುವೇ ಮುಖ್ಯ. ಅವರ ಮಾತಿನಿಂದ ಅವರ ಸಂಸ್ಕೃತಿ ತೋರಿಸಿದ್ದಾರೆ ಆರ್​ಎಸ್​ಎಸ್​ ಕಲಿಸಿಲ್ವಾ(?) ಎಂದು ಅವರು ಬಿಜೆಪಿಯವರನ್ನು ಕುಟುಕಿದ್ದಾರೆ.

ಇನ್ನು ಮೇ 23ರ ನಂತರ ದೇಶದಲ್ಲಿ ಖಂಡಿತ ಬದಲಾವಣೆ ಆಗುತ್ತೆ. ನಾವು ಕುಂದಗೋಳ ಗೆಲ್ಲುತ್ತೇವೆ. ಆದರೆ, ಕೆಲಸ ಮಾಡಬೇಕು. ಮೈಮರೆತು ಕೂರಬಾರದು ಎಂದು ಹುಬ್ಬಳ್ಳಿಯಲ್ಲಿ ಡಿ.ಕೆ ಸುರೇಶ್ ತಿಳಿಸಿದರು.

 

Recommended For You

Leave a Reply

Your email address will not be published. Required fields are marked *