ಇಂದು ಮುಂಬೈ ಇಂಡಿಯನ್ಸ್​ ವಸರ್ಸ್ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್​ ಕದನ​​

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್​ನ 12ನೇ ಆವೃತ್ತಿಯ ಫೈನಲ್  ಪಂದ್ಯ  ಇಂದು ನಡೆಯಲಿದೆ.  ಹೈದ್ರಾಬಾದ್​ನ ಉಪ್ಪಾಳ ಅಂಗಳದಲ್ಲಿ ಹಾಲಿ ಚಾಂಪಿಯನ್  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್  ಶರ್ಮಾ ನೇತೃತ್ವದ  ಮುಂಬೈ ಇಂಡಿಯನ್ಸ್​​ ತಂಡಗಳ ಐಪಿಎಲ್​ ಕಿರೀಟಕ್ಕಾಗಿ  ದೊಡ್ಡ  ಹೋರಾಟವನ್ನೆ ಮಾಡಲಿವೆ.

18 ಅಂಕಗಳೊಂದಿಗೆ  ಮೊದಲ  ಸ್ಥಾನದಲ್ಲಿರುವ  ಮುಂಬೈ ಮತ್ತು  ಇದೇ ಅಂಕದೊಂದಿಗೆ ಎರಡನೇ  ಸ್ಥಾನದಲ್ಲಿರುವ  ಚೆನ್ನೈ  ಸೂಪರ್  ಕಿಂಗ್ಸ್  ಪ್ರಶಸ್ತಿಗಾಗಿ  ಅಂತಿಮ ಹೋರಾಟ ನಡೆಸಲಿವೆ.

ಮೊನ್ನೆ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್‌ಗೆ ಶರಣಾಗಿದ್ದ ಚೆನ್ನೈ. ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲಿನ ಪಂಚ್​​ ನೀಡುವ ಮೂಲಕ ಫೈನಲ್​ಗೆ ಎಂಟ್ರಿಕೊಟ್ಟಿದೆ.

ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಹ್ಯಾಟ್ರಿಕ್​ ಸೋಲು ಅನುಭವಿಸಿರುವ ಚೆನ್ನೈ ಸೂಪರ್​ ಕಿಂಗ್ಸ್​ಗೆ ಪ್ರತೀಕಾರದ ಪಂದ್ಯವಾಗಿದೆ. ಚೆನ್ನೈ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಮುಂಬೈ ಇಂಡಿಯನ್ಸ್​, ಇಂದಿನ ಪಂದ್ಯದಲ್ಲೂ ಗೆಲ್ಲುವ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ..

4ನೇ ಐಪಿಎಲ್ ಕಪ್​ ಮೇಲೆ ಉಭಯ ತಂಡಗಳ ಕಣ್ಣು(!)

ಚೆನ್ನೈ ಸೂಪರ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ಎರಡು  ಬದ್ಧ ವೈರಿ ತಂಡಗಳು. ಇದುವರೆಗೆ ಉಭಯ ತಂಡಗಳು ತಲಾ ಮೂರು ಬಾರಿ ಐಪಿಎಲ್​​​​ ಗೆದ್ದು ಬೀಗಿವೆ, ಈಗ ನಾಲ್ಕನೇ ಟೈಟಲ್​ ಗೆಲುವಿನ ಅದೃಷ್ಟದ ಪರೀಕ್ಷೆಗೆ ಇಳಿಯುತ್ತಿವೆ.

ಐಪಿಎಲ್​ ಟೈಟಲ್​ ಉಳಿಸಿಕೊಳ್ಳಲು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಹೋರಾಟ ನಡೆಸುತ್ತಿದ್ರೆ. ಅತ್ತ ಮತ್ತೆ ಚಾಂಪಿಯನ್ ಪಟ್ಟಕ್ಕೇರಲು ಮುಂಬೈ ಇಂಡಿಯನ್ಸ್​ ಕಾತರದಿಂದಿದೆ.

ಫೈನಲ್ಸ್​​​ನಲ್ಲಿ ಚೆನ್ನೈ-ಮುಂಬೈ ಹಣಾಹಣಿ

ಒಟ್ಟು ಪಂದ್ಯಗಳು –                        03

ಮುಂಬೈ ಇಂಡಿಯನ್ಸ್-​                   02

ಚೆನ್ನೈ ಸೂಪರ್​ ಕಿಂಗ್ಸ್​-                  01

ಇದುವರೆಗೂ  ಐಪಿಎಲ್​​​​​ ಫೈನಲ್ಸ್​ನಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಕಿಯಾಗಿದ್ದು, ಇದರಲ್ಲಿ  2 ಬಾರಿ ಮುಂಬೈ ಇಂಡಿಯನ್ಸ್​ ಗೆದ್ರೆ, 1 ಬಾರಿ ಮಾತ್ರ ಚೆನ್ನೈ ಸೂಪರ್​ ಕಿಂಗ್ಸ್​ ಗೆದ್ದಿದೆ.

ಇನ್ನೂ ನಾಲ್ಕನೇ ಬಾರಿಗೆ ಫೈನಲ್​ ಹೋರಾಟದಲ್ಲಿ ಮತ್ತೆ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿಯಾಗುತ್ತಿದ್ದು, ನಾಲ್ಕನೇ ಐಪಿಎಲ್ ಗೆಲುವಿನ ಮೇಲೆ ಉಭಯ ತಂಡಗಳ ಚಿತ್ತ ನೆಟ್ಟಿದೆ..

ಮುಂಬೈ ವಿರುದ್ಧ ಚೆನ್ನೈಗೆ ಪ್ರತೀಕಾರದ ಪಂದ್ಯ

ಟೂರ್ನಿಯಲ್ಲಿ ಮುಂಬೈ ವಿರುದ್ಧ ಹ್ಯಾಟ್ರಿಕ್​ ಸೋಲು ಅನುಭವಿಸಿರುವ ಚೆನ್ನೈಗೆ ಪ್ರತೀಕಾರದ ಪಂದ್ಯವಾಗಿದೆ. ಮುಂಬೈ ವಿರುದ್ಧ ಮೇಲುಗೈ ಸಾಧಿಸಬೇಕಾದರೆ, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಓಪನರ್ಸ್​ ಫಾಫ್​​ ಡುಪ್ಲಿಸಿಸ್​, ಶೇನ್ ವಾಟ್ಸನ್​ ಉತ್ತಮ ಆರಂಭ ನೀಡಲೇಬೇಕಿದೆ.

ಸದ್ಯ ರನ್ ಬರ ಎದುರಿಸುತ್ತಿರುವ ಸುರೇಶ್​​ ರೈನಾ, ಅಂಬಾಟಿ ರಾಯುಡು ಸಿಡಿದೇಳಬೇಕಾದ ಅನಿವಾರ್ಹತೆ ಇದೆ. ಡ್ವೇನ್ ಬ್ರಾವೋ ಈ ಬಾರಿ ಮ್ಯಾಚ್​ ವಿನ್ನರ್​ ಆಗಿ ಗುರುತಿಸಿಕೊಂಡಿಲ್ಲ. ಹೀಗಾಗಿ ಚೆನ್ನೈ ತಂಡದ ನಾವಿಕ ಧೋನಿಯೂ ಮ್ಯಾಚ್​ ಫಿನಿಷರ್​ ಆಗಿ ತಂಡಕ್ಕೆ ಆಸರೆ ಆಗಬೇಕಿದೆ.

ಚೆನ್ನೈ ಬೌಲಿಂಗ್​ ಡಿಪಾರ್ಟ್​ಮೆಂಟ್​ನ ಆಸ್ತಿ ಸ್ಪಿನ್ನರ್ಸ್​ ಎಂಬುವುದು ಡೆಲ್ಲಿ ವಿರುದ್ಧ ಮತ್ತೆ ಸಾಬೀತಾಗಿದೆ. ಇಮ್ರಾನ್ ತಾಹೀರ್​, ಹರಭಜನ್​ ಸಿಂಗ್, ಜಾಡೇಜಾ ಜಾದೂ ಮಾಡೋಕೆ ಸಜ್ಜಾಗಿದ್ದು. ವೇಗಿ ದೀಪಕ್​ ಚಹರ್​, ಡ್ವೇನ್​ ಬ್ರಾವೋ ತಂಡದ ಅಗತ್ಯಕ್ಕೆ ತಕ್ಕಂತೆ ಬೌಲಿಂಗ್​ ಮಾಡುವ ಚಾಕಚಕ್ಯತೆ ಹೊಂದಿದ್ದಾರೆ. ತಮ್ಮ ನೈಜ ಆಟ ಪ್ರದರ್ಶಿಸಿದ್ರೆ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಕಬ್ಬಿಣದ ಕಡಲೆಯಾಗೋದ್ರಲ್ಲಿ ಅನುಮಾವೇ ಇಲ್ಲ..

ಚೆನ್ನೈ ವಿರುದ್ಧ ಮತ್ತೆ ಪಾರುಪತ್ಯ ಸಾಧಿಸುತ್ತಾ ಮುಂಬೈ(?)

12ನೇ ಆವೃತ್ತಿಯ ಲೀಗ್​ ಹಂತದಲ್ಲಿ 3 ಬಾರಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಮಣ್ಣು ಮುಕ್ಕಿಸಿರುವ ಮುಂಬೈ ಇಂಡಿಯನ್ಸ್​​, ಫೈನಲ್ಸ್​​​ನಲ್ಲಿ ಮತ್ತೊಮ್ಮೆ ಚೆನ್ನೈಗೆ ಸೋಲುಣಿಸುವ ಉತ್ಸಾಹದಲ್ಲಿದೆ.

ಮುಂಬೈ ಇಂಡಿಯನ್ಸ್​ ತಂಡದ ಬ್ಯಾಟಿಂಗ್​ ಹಾಗೂ ಬೌಲಿಂಗ್ ಅತ್ಯುತ್ತಮವಾಗಿದೆ. ಅಗ್ರ ಕ್ರಮಾಂಕದಲ್ಲಿ ರೋಹಿತ್​ ಶರ್ಮಾ, ಡಿಕಾಕ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಸೂರ್ಯ ಕುಮಾರ್​ ಯಾದವ್​  ಫಾರ್ಮ್ಗೆ ಮರಳಿರುವುದು ತಂಡಕ್ಕೆ ಬಲ ಹೆಚ್ಚಿಸಿದೆ.

ಹಾರ್ದಿಕ್​ ಪಾಂಡ್ಯಾ​ ಮೇಲೆ ಹೆಚ್ಚಿನ ನಿರೀಕ್ಷೆ  ಇಡಲಾಗಿದ್ದು, ಇಂದಿನ ಪಂದ್ಯದಲ್ಲಿ ಅಬ್ಬರಿಸಿದ್ರೆ ಮುಂಬೈ ಐಪಿಎಲ್ ಅಧಿಪತಿ ಆಗೋದು ಗ್ಯಾರಂಟಿ. ಆದರೆ ಇದು ಅಷ್ಟು  ಸುಲಭದ ಮಾತಲ್ಲ ಯಾಕಂದ್ರೆ ಎದುರಾಳಿ ನಾಯಕನಾಗಿರೋದು ಧೋನಿ. ಧೋನಿಯ ರಣತಂತ್ರದ ಮುಂದೆ ಯಾವ ಆಟವೂ ನಡೆಯೋದಿಲ್ಲ ಹೀಗಾಗಿ  ಮುಂಬೈ ತಂಡಕ್ಕೆ ಗೆಲುವು ಅಷ್ಟು ಸುಲಭವಾಗಿಲ್ಲ.

ಮುಂಬೈ ಇಂಡಿಯನ್ಸ್​ ತಂಡದಲ್ಲಿ ಮ್ಯಾಚ್ ವಿನ್ನಿಂಗ್ ಬೌಲರ್​​ಗಳ ದಂಡೇ ಇದೆ. ವೇಗಿ ಬೂಮ್ರಾ, ಲಸಿತ್​ ಮಾಲಿಂಗ, ಪಾಂಡ್ಯಾ ಬ್ರದರ್ಸ್​, ಜಯಂತ್​ ಯಾದವ್, ರಾಹುಲ್​ ಚಹರ್​​ ಇಂದಿನ ಪಂದ್ಯದಲ್ಲಿ ತಂಡಕ್ಕೆ ವಿಜಯಮಾಲೆ ತೊಡಿಸೋ ಉತ್ಸಾಹದಲ್ಲಿದ್ದಾರೆ.

ಚೆನ್ನೈ  ಗೆಲುವು  ನಿಂತಿರೋದು  ಧೋನಿಯ  ಗೇಮ್ ಪ್ಲಾನ್, ವಿಕೆಟ್  ಕೀಪಿಂಗ್  ಮತ್ತು  Oppostion Strategy ಮೇಲೆ ಇದೆ್ಲ ವರ್ಕೌಟ್  ಆದ್ರೆ  ಚೆನ್ನೈ ಮತ್ತೆ ಚಾಂಪಿಯನ್  ಆಗೋದ್ರಲ್ಲಿ  ಮತ್ತೆ  ಅನುಮಾನವೇ ಇಲ್ಲ .

4ನೇ ಬಾರಿಗೆ ಚಾಂಪಿಯನ್​ ಆಗಲು ಐಪಿಎಲ್​ನ ಮದಗಜಗಳು ಹೋರಾಟ ನಡೆಸಲಿದ್ದು, 12ನೇ ಆವೃತ್ತಿಯ ಅಧಿಪತಿ ಯಾರ್​ ಆಗ್ತಾರೆ ಅಂತ ಕಾದು ನೋಡಬೇಕಿದೆ.

Recommended For You

Leave a Reply

Your email address will not be published. Required fields are marked *