ಸಾರ್ವಜನಿಕವಾಗಿಯೇ ಹೊಡೆದಾಡಿಕೊಂಡ ರಾಜಕೀಯ ನಾಯಕರು

ನವದೆಹಲಿ: ತೆಲಂಗಾಣದಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಇಬ್ಬರು ನಾಯಕರು ಬಹಿರಂಗವಾಗಿಯೇ ಹೊಡೆದಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಟರ್ ಮೀಡಿಯೇಟ್ ಫಲಿತಾಂಶದಲ್ಲಾದ ಪ್ರಮಾದ ಕುರಿತು ಪ್ರತಿಭಟನೆ ನಡೆಸುತ್ತಿದ್ದಾಗ ಈ ಮಾರಾಮಾರಿ ನಡೆದಿದೆ.

ಹನುಮಂತ ರಾವ್ ಮತ್ತು ನಾಗೇಶ್ ಮುಂದಿರಾಜ್ ಸಾರ್ವಜನಿಕವಾಗಿಯೇ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಇದಕ್ಕೆ ನೂರಾರು ಪ್ರತಿಭಟನಾಕಾರರು ಸಾಕ್ಷಿಯಾಗಿದ್ದರು. ಇತ್ತೀಚೆಗೆ ತೆಲಂಗಾಣದಲ್ಲಿ ಇಂಟರ್ ಮೀಡಿಯೇಟ್ ಫಲಿತಾಂಶ ಪ್ರಕಟವಾಗಿತ್ತು.

ಮೂರುವರೆ ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಹೀಗಾಗಿ, ಫಲಿತಾಂಶ ಮರುಪರಿಶೀಲಿಸುವಂತೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳೂ ಬೀದಿಗೆ ಇಳಿದಿವೆ. ಈ ವೇಳೆ ಕಾಂಗ್ರೆಸ್ ನಾಯಕರ ನಡುವೆ ಮಾರಾಮಾರಿ ನಡೆದಿದೆ.

Recommended For You

Leave a Reply

Your email address will not be published. Required fields are marked *