Top

'ಏ ಥೂ.. ಹೇಳಿ ಹೇಳಿ ಸಾಕಾಯ್ತು ನಂಗೆ, ಮಿಸ್ಟರ್ ಯಡಿಯೂರಪ್ಪ.. ನಿನ್ನಿಂದ ಸರ್ಕಾರ ಬೀಳಿಸೋಕ್ಕೆ ಆಗಲ್ಲ '

ಏ ಥೂ.. ಹೇಳಿ ಹೇಳಿ ಸಾಕಾಯ್ತು ನಂಗೆ, ಮಿಸ್ಟರ್ ಯಡಿಯೂರಪ್ಪ.. ನಿನ್ನಿಂದ ಸರ್ಕಾರ ಬೀಳಿಸೋಕ್ಕೆ ಆಗಲ್ಲ
X

ಕಲಬುರಗಿ: ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

20 ಶಾಸಕರು ಬರುತ್ತಾರೆಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಅವನಿಗೇನು ಸತ್ಯಾನೂ ಗೊತ್ತಿಲ್ಲ ಸುಳ್ಳು ಗೊತ್ತಿಲ್ಲ. ಅವನು ಮಾತಾಡೋದು ಅವನಿಗೇ ಅರ್ಥ ಆಗಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರದ ಬುಡ ಅಲ್ಲಾಡತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಷ್ಟು ದಿನ ಯಾವ ಸರ್ಕಾರ ಇತ್ತು..? ಎನ್‌ಡಿಎನೇ ತಾನೇ..? ಆದ್ರೂ ನಮ್ಮನ್ನ ಏನೂ ಮಾಡೋಕ್ಕೆ ಆಗಲ್ಲ. ಮೋದಿ ಮತ್ತೆ ಪ್ರಧಾನಿಯಾಗೋಕ್ಕೆ ಸಾಧ್ಯಾನೇ ಇಲ್ಲ. ರಾಹುಲ್ ಗಾಂಧಿನೇ ಪ್ರಧಾನಿಯಾಗೋದು.ಮಿಸ್ಟರ್ ಯಡಿಯೂರಪ್ಪ.. ನಿನ್ನಿಂದ ಸರ್ಕಾರ ಬೀಳಿಸೋಕ್ಕೆ ಆಗಲ್ಲ ಎಂದು ಸವಾಲ್ ಹಾಕಿದ್ದಾರೆ.

ಮೈತ್ರಿಯಿಂದ ಪ್ಲಸ್‌ಗಿಂತ ಮೈನಸ್ ಆಗ್ತಿದೆ ಎಂಬ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ನಾವೇನು ನಾರಾಯಣಗೌಡನನ್ನ ಕೇಳಿಕೊಂಡು ಮೈತ್ರಿ ಮಾಡಿಕೊಂಡೆವಾ? ಅವನ ಮಾತಿಗೆಲ್ಲ ನಾವು ಬೆಲೆ ಕೊಡೋಕ್ಕೆ ಆಗಲ್ಲರೀ. ಹೈಕಮಾಂಡ್ ತಿರ್ಮಾನದಂತೆ ಸರ್ಕಾರ ರಚನೆ ಮಾಡಿದ್ದೀವಿ ಎಂದು ಹೇಳಿದ್ದಾರೆ.

Next Story

RELATED STORIES