ಭಾರತ ವಾಯುಪ್ರದೇಶದ ಗಡಿ ಉಲ್ಲಂಘಿಸಿದ ವಿಮಾನ ಇಳಿಸಿದ ಐಎಎಫ್​

ನವದೆಹಲಿ: ಅಮೆರಿಕಾದ ಜಾರ್ಜಿಯಾ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುಪ್ರದೇಶ ಗಡಿ ಉಲ್ಲಂಘಿಸಿದೆ ಎಂದು ವರದಿ ಆಗಿದೆ.

ಟಿಬಿಲಿಸಿಯಿಂದ ಪಾಕಿಸ್ತಾನದ ಕರಾಚಿ ಮಾರ್ಗವಾಗಿ ದೆಹಲಿಗೆ ಬರುತಿತ್ತು. ಈ ಸಂದರ್ಭದಲ್ಲಿ ಕರಾಚಿಯಿಂದ ಮಾರ್ಗ ಬದಲಿಸಿ ಗುಜರಾತ್‌ನ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯುಪ್ರದೇಶ ಪ್ರವೇಶಿಸಿದೆ. ಇದನ್ನು ಗಮನಿಸಿದ ಭಾರತೀಯ ವಾಯುಪಡೆ, ರೇಡಿಯೊ ಕರೆ ರವಾನಿಸಿದೆ. ಆದ್ರೆ, ವಿಮಾನದ ಸಿಬ್ಬಂದಿ ಸ್ವೀಕರಿಸಿಲ್ಲ. ಅಲ್ಲದೆ, ಮಾರ್ಗ ಬದಲಾವಣೆ ಮಾಡಿಕೊಂಡು 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.

ಇದರಿಂದ ಅನುಮಾನಗೊಂಡ ಭಾರತೀಯ ವಾಯುಪಡೆ, ತಕ್ಷಣ ಕಾರ್ಯಪ್ರವೃತ್ತವಾಗಿ ಆಗಸದಲ್ಲೇ ವಿಮಾನ ತಡೆದು, ಬಲವಂತವಾಗಿ ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಸಿತು. ವಿಮಾನ ಸಿಬ್ಬಂದಿ ಮತ್ತು ಪೈಲಟ್‌ ವಿಚಾರಣೆ ನಡೆಯುತ್ತಿದೆ. ವಾಯುಪಡೆ ಅಧಿಕಾರಿಗಳ ವಿಮಾನದ ತಪಾಸಣೆ ಕೂಡ ನಡೆಸುತ್ತಿದ್ದಾರೆ.

ವೇಳಾಪಟ್ಟಿಗೆ ಅನುಗುಣವಾಗಿ ಹಾರಾಟ ಕೈಗೊಂಡಿತ್ತಾದರೂ ಅದರ ವಾಯುಮಾರ್ಗ ತಪ್ಪಾಗಿತ್ತು. ಈ ವಿಮಾನ ಇಳಿಸುವಲ್ಲಿ ಎರಡು ಸುಖೋಯ್‌ ಫೈಟರ್‌ಗಳು ಬೆಂಗಾವಲಿಗೆ ಇದ್ದವು. ರಷ್ಯಾ ನಿರ್ಮಿತಿ ಆಂಟೊನೊವ್ ಎಎನ್-12 ಬೃಹತ್ ಸರಕು ಸಾಗಣೆ ವಿಮಾನ 4 ಎಂಜಿನ್‌ ಹೊಂದಿದೆ.

ಅಲ್ಲದೆ, ಈ ಮಾದರಿಯ ವಿಮಾನಗಳ ಸರಕು ಸಾಗಣೆಗೆ ಪ್ರಸಿದ್ಧಿ ಪಡೆದಿವೆ. ಗುಜರಾತ್‌ನ ಕಛ್‌ ಪ್ರದೇಶದಲ್ಲಿರುವ ಮಹತ್ವದ ರಣ್‌ ವಾಯುನೆಲೆಯಿಂದ 70 ಕಿಲೋ ಮೀಟರ್‌ ದೂರದಲ್ಲಿ ಭಾರತೀಯ ವಾಯುಪ್ರದೇಶ ಪ್ರವೇಶಿಸಿದ್ದು ಅನುಮಾನ ಮೂಡಿಸಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.