ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಡೋಕ್ಕೆ ಸತೀಶ್- ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್..?

ಬೆಳಗಾವಿ: ಗೋಕಾಕ್ ಕ್ಷೇತ್ರದ ಕೈ ಶಾಸಕ ರಮೇಶ್ ಜಾರಕಿಹೊಳಿ ಯಾವುದೇ ಪಕ್ಷಕ್ಕೆ ಸಪೋರ್ಟ್ ಮಾಡುವುದಿಲ್ಲವೆಂದು ತಟಸ್ಥವಾಗಿ ಉಳಿದಿದ್ದಕ್ಕೆ, ಸಹೋದರ ಸತೀಶ್ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯರನ್ನೇ ಗೋಕಾಕ್‌ಗೆ ಕರೆಸಿ ಪ್ರಚಾರ ಮಾಡಿಸಲು ಮುಂದಾಗಿದ್ದಾರೆ.

ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡು ಕಾಂಗ್ರೆಸ್‌ ಬಿಡಲು ತೀರ್ಮಾನಿಸಿದ್ದ ರಮೇಶ್ ಜಾರಕಿಹೊಳಿ, ಅತ್ತ ರಾಜೀನಾಮೆಯೂ ನೀಡದೇ, ಬಿಜೆಪಿಗೂ ಸೇರದೆ ಸುಮ್ಮನೆ ಉಳಿದಿದ್ದರು. ಆದರೆ ನಿನ್ನೆ ದಿಢೀರ್ ಸಭೆ ಕರೆದು, ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲವೆಂದು ಹೇಳಿದ್ದಾರೆ.

ಈ ಕಾರಣಕ್ಕೆ ಸತೀಶ್ ಜಾರಕಿಹೊಳಿ, ಶಿಷ್ಯನನ್ನ ಗುರುವಿನಿಂದಲೇ ಮಣಿಸಲು ಪ್ಲಾನ್ ಮಾಡಿದ್ದಾರೆ. ಗೋಕಾಕ್‌ಗೆ ಸಿದ್ದರಾಮಯ್ಯರನ್ನ ಕರೆಸಿ ಪ್ರಚಾರ ಮಾಡಿಸಲು ಸತೀಶ್ ಪ್ಲಾನ್ ಮಾಡಿದ್ದು, ರಮೇಶ್‌ಗೆ ಟಾಂಗ್ ಕೊಡಲು ರೆಡಿಯಾಗಿದ್ದಾರೆ.

ಇಂದು ನ್ಯೂ ಇಂಗ್ಲೀಷ್ ಶಾಲಾ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದು, ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಸಾಧುನವರ್ ಪರ ಪ್ರಚಾರ ಮಾಡಲಿದ್ದಾರೆ.

Recommended For You

Leave a Reply

Your email address will not be published. Required fields are marked *