‘ದೇವೇಗೌಡರು ತಪ್ಪು ಮಾಡಿದ್ದಾರೆ’ – ಎ.ಮಂಜು

ಹಾಸನ: ಕಾಂಗ್ರೆಸ್ ಹಾಗೂ ಬಿಜೆಪಿ ಮತದಾರ ಬಂಧುಗಳಿಗೆ ಅಭಿನಂದನೆಗಳು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹಾಸನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬದಲಾವಣೆ ಬೇಕು, ಕುಟುಂಬ ರಾಜಕಾರಣ ಕೊನೆಗಾಣಬೇಕು, ಹಾಗಾಗಿ ಎಲ್ಲ ವರ್ಗದವರು ಸಹಕರಿಸಿದ್ದಾರೆ.  ದೇವೇಗೌಡರು ತಪ್ಪು ಮಾಡಿದ್ದಾರೆ. ಜಿಲ್ಲೆಯಿಂದ ಚುನಾವಣೆಗೆ ನಿಲ್ಲಬೇಕಿತ್ತು ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.

ಇನ್ನು ಕಾಂಗ್ರೆಸ್ ಕಾರ್ಯಕರ್ತರು ನನಗೆ 65% ಮತ ನೀಡಿದ್ದಾರೆ ಎಂದು ನನ್ನ ಭಾವಿಸಿದ್ದೇನೆ. ಬಿಜೆಪಿಯ ಸುಮಾರು ಮೂರು ಲಕ್ಷ ಮತಗಳಿವೆ, ಅವು ಕೂಡ ನನಗೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ನನ್ನ ಗೆಲುವು ಗ್ಯಾರಂಟಿಯಾಗಿದೆ. ಜಿಲ್ಲೆಯಲ್ಲಿ 11 ಲಕ್ಷ ಮತಗಳಾಗಿವೆ, ಇದರಲ್ಲಿ ನನಗೆ ೫.೭೦ ಲಕ್ಷ ಮತಗಳು ನನ್ನದಗಾಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೇ ನಾನು ವಿಶ್ರಾಂತಿ ಮಾಡುವುದಕ್ಕೆ ಎಲ್ಲೂ ಹೋಗೊದಿಲ್ಲ, ನಮ್ಮೂರೇ ನನಗೆ ಸ್ವರ್ಗ. ಯಾವ ಸಿಂಗಾಪುರವು ಇಲ್ಲ, ಎಂಥದ್ದು ಇಲ್ಲ, ಹೆಂಡತಿ ಮಕ್ಕಳು ಹಾಗೂ ಮೊಮ್ಮಕ್ಕಳು ಜೊತೆ ಕಾಲ ಕಳೆಯುತ್ತೇನೆ ಎಂದು ನುಡಿದರು.

ಸದ್ಯ ನಾನು ಕೂಡ ಶಿವಮೊಗ್ಗಕ್ಕೆ ಪ್ರಚಾರಕ್ಕೆ ಹೋಗಬೇಕು. ಜಿಲ್ಲೆಯಲ್ಲಿ  ಮತದಾನ ನಡೆದಿರುವುದು ಕುಟುಂಬ ವರ್ಸಸ್ ದೇಶ ಅಷ್ಟೇ. ಮೋದಿಯನ್ನು ಪ್ರಧಾನಿ ಆಗುವುದನ್ನು ಯಾರು ತಪ್ಪಿಸುವುದಕ್ಕೆ ಆಗುವುದಿಲ್ಲ. ಮೋದಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬೀಳಲಿದೆ ಎಂದು ಎ. ಮಂಜು ಭವಿಷ್ಯ ನುಡಿದರು.

 

Recommended For You

Leave a Reply

Your email address will not be published. Required fields are marked *