ಚರ್ಚ್​​ನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಒಂದು ಗಂಟೆ ಮುಂಚಿತವಾಗಿ ತೆಗೆದ ಚಿತ್ರ ವೈರಲ್…!

ಫ್ರಾನ್ಸ್, ಪ್ಯಾರಿಸ್: ನಗರದ ಇತಿಹಾಸ ಸುಪ್ರಸಿದ್ಧ ‘ನಾಟ್ರೆ ಡೇಮ್ ಚರ್ಚ್‌’ ಬೆಂಕಿ ಅನಾಹುತ ಒಳಗಾಗುವುದಕ್ಕೂ ಮುಂಚಿನ ಒಂದು ಗಂಟೆ ಮೊದಲು ಅಲ್ಲಿಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಚರ್ಚ್​ ಮುಂದೆ ನಿಂತು ಸೆರೆ ಹಿಡಿದಿದ್ದ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಅಮೆರಿಕದ ಮಿಚಿಗನ್‌ನ ಬ್ರೂಕ್ ವಿಂಡ್ಸರ್ ಎಂಬುವವರು ಸ್ನೇಹಿತೆಯೊಟ್ಟಿಗೆ ಸೋಮವಾರದಂದು ಚರ್ಚ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಪ್ಪ ಮತ್ತು ಮಗಳು ‘ವಿಂಡ್ಸರ್ ಊಹೆಯಂತೆ’ ಆಟವಾಡುತ್ತಿರುವ ಚಿತ್ರ ಸೆರೆ ಹಿಡಿದಿದ್ದರು. ಇದನ್ನು ಆ ತಂದೆ, ಮಗಳಿಗೆ ನೀಡಲು ನಿರ್ಧರಿಸಿರುವುದಾಗಿ ಹೇಳಿರುವ ವಿಂಡ್ಸರ್, ಅವರನ್ನು ಹುಡಕಲು ನೆರವು ನೀಡುವಂತೆ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.

“ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೆ ಒಳಗಾಗುವ ಮುಂಚಿನ ಒಂದು ಗಂಟೆ ಮೊದಲು ನಾನು ಈ ಚಿತ್ರವನ್ನು ಸೆರೆಹಿಡಿದಿದ್ದೇನೆ. ಆ ತಂದೆಯ ಭೇಟಿ ಮಾಡಿ ಈ ಫೋಟೊ ನಿಮಗೆ ಬೇಕೇ ಎಂದು ಕೇಳಬೇಕು ಎಂದುಕೊಂಡಿದ್ದೆ. ಈಗ ನಾನು ಅದನ್ನು ಅವರಿಗೆ ನೀಡ ಬಯಸಿದ್ದೇನೆ. ಟ್ವೀಟರ್, ನಿನ್ನಲ್ಲೇನಾದರೂ ಆ ಮ್ಯಾಜಿಕ್ ಇದ್ದರೆ ಅವರನ್ನು ಹುಡುಕಲು ಸಹಕರಿಸು” ಎಂದು ವಿಂಡ್ಸರ್ ಟ್ವೀಟ್ ಮಾಡಿದ್ದಾರೆ. ಇದು ಸದ್ಯ ವೈರಲ್ ಆಗಿದೆ.

‘ಅವರು ಅಪ್ಪ, ಮಗಳು ಎಂಬುದರ ಬಗ್ಗೆ ನನಗೆ ನಿಖರವಾಗಿ ತಿಳಿದಿಲ್ಲ. ಮೇಲ್ನೋಟಕ್ಕೆ ಹಾಗೆ ಭಾವಿಸಿದೆ. ಅವರು ಚಿಕ್ಕಪ್ಪ, ಸಹೋದರ, ಸ್ನೇಹಿತ ಆಗಿರಲೂಬಹುದು. ಅವರನ್ನು ಪತ್ತೆಮಾಡುವ ತನಕ ಅದು ಗೊತ್ತಾಗದು’ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದಿದ್ದರೆ ಆ ಫೋಟೊ ಬೇಕೆಂದು ಬಯಸುತ್ತಿದ್ದೆ. ಆ ವ್ಯಕ್ತಿಯೂ ಹಾಗೆಯೇ ಭಾವಿಸಬಹುದು ಎಂದುಕೊಂಡಿದ್ದೇನೆ. ಫೋಟೊದಲ್ಲಿರುವ ವ್ಯಕ್ತಿಯನ್ನು ಪತ್ತೆ ಮಾಡುವ ಆಶಾಭಾವನೆ  ಹೊಂದಿದ್ದೇನೆ ಎಂದೂ ವಿಂಡ್ಸರ್ ಹೇಳಿದ್ದಾರೆ.

ಏಪ್ರಿಲ್ 15ರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಟ್ರೆ ಡೇಮ್ ಚರ್ಚ್‌ನ ಮೇಲ್ಭಾಗದ ಪಿರಮಿಡ್ ಆಕೃತಿ ಮತ್ತು ಛಾವಣಿ ಬೆಂಕಿಗೆ ಆಹುತಿಯಾಗಿತ್ತು. ಆದ್ರೆ, ಚರ್ಚ್‌ನ ಎತ್ತರದ ಅವಳಿ ಗೋಪುರಗಳಿಗೆ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.