ನಿಮ್ಮ ಧರ್ಮಪತ್ನಿ, ನಿಮ್ಮ ಜೊತೆಗಿಲ್ಲ, ನಿಮಗೆ ಎಷ್ಟು ವರ್ಷ ಜೈಲಿಗೆ ಹಾಕ್ಬೇಕು..? – ವಿಶ್ವನಾಥ್

ಮಂಡ್ಯ: ಭಾರತದಲ್ಲಿ ಎರಡು ತತ್ವಗಳ ನಡುವೆ ಸಂಘರ್ಷ ನಡೀತಿದೆ. ನಕಲಿ ರಾಷ್ಟ್ರವಾದಿಗಳು, ಬಹುತ್ವವಾದಿಗಳ ತತ್ವದಲ್ಲಿ ಚುನಾವಣೆ ನಡೀತೀದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದರು.

ಮಂಡ್ಯದ ಕೆ.ಆರ್ ಪೇಟೆಯಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ದ್ರೋಹಿಗಳು ಎಂಬಂತಾಗಿದೆ. ಬಿಜೆಪಿಯವರು ಮಂಡ್ಯದ ಬಜೆಟ್ ಅಂದ್ರು, ಇವತ್ತು ಹಿಮ್ಮೇಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾರನ್ನು ಬಿಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಇನ್ನು ಸುಮಲತಾ ಸ್ವತಂತ್ರ್ಯ ಅಭ್ಯರ್ಥಿ ಅಲ್ಲ, ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ತಲಾಖ್ ಕಾನೂನು ಏನು ಮಾಡಿದ್ರಿ. ತ್ರಿವಳಿ ತಲಾಖ್್​ಗೆ ಮೂರು ವರ್ಷ ಜೈಲು ಶಿಕ್ಷೆ ಮಾಡಿದ್ದೀರಿ ಎಂದರು.

ಸದ್ಯ ನಿಮ್ಮನ್ನು ಪ್ರಶ್ನೆ ಮಾಡ್ತೀನಿ ಮೋದಿ. ನಿಮ್ಮ ಧರ್ಮ ಪತ್ನಿ ನಿಮ್ಮ ಜೊತೆಗಿಲ್ಲ, ಹಾಗಾದ್ರೆ ನಿಮಗೆ ಎಷ್ಟು ವರ್ಷ ಜೈಲಿಗೆ ಹಾಕಬೇಕು ಒಬ್ಬರಿಗೊಂದು ಕಾನೂನು ಮಾಡಲು ಜನ ತಂತ್ರದಲ್ಲಿ ಅವಕಾಶವಿಲ್ಲ ಎಂದು ಹೆಚ್.ವಿಶ್ವನಾಥ್ ಮೋದಿ ಬಗ್ಗೆ ನೇರವಾಗಿ ಟೀಕಿಸಿದ್ದಾರೆ.

Recommended For You

Leave a Reply

Your email address will not be published. Required fields are marked *