ಮಂಡ್ಯ ಅಖಾಡಕ್ಕೆ ಸುಮಲತಾ ಪರ ಪ್ರಚಾರ ಮಾಡಲು ತಲೈವಾ ಎಂಟ್ರಿ..!

ಮಂಡ್ಯ: ಹೈ-ವೋಲ್ಟೇಜ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ದಿನೆದಿನೆ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್? ಬರಬೇಕು ಎಂದು ಅವರ ಅಭಿಮಾನಿಗಳು ಒತ್ತಡ ಹಾಕಿದ್ದಾರೆ.

ಏಪ್ರಿಲ್ 16 ರಂದು ನಾಳೆ ಬಹಿರಂಗ ಪ್ರಚಾರಕ್ಕೆ ಕಡೇ ದಿನವಾಗಿದೆ. ಇಂದು ನಿಖಿಲ್ ಕುಮಾರಸ್ವಾಮಿ ಪರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಚಾರ ಮಾಡುತ್ತಿದ್ದಾರೆ. ಇತ್ತ ನಟ ರಜನಿಕಾಂತ್ ಕರೆಸಲೇ ಬೇಕು ಎಂದು ಸುಮಲತಾಗೆ ಅಭಿಮಾನಿಗಳ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಸ್ಟಾರ್ ನಟ ರಜಿನಿಕಾಂತ್ ಕರೆಸುವಂತೆ ಒತ್ತಾಯವಿದ್ದು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ರಜನಿಕಾಂತ್ ಬಹಳ ಆತ್ಮೀಯ ಸೇಹ್ನಿತರಾಗಿದ್ದರು. ಈ ಬೆನ್ನಲೆ ಸುಮಲತಾ ಅಂಬರೀಶ್ ಈಗಾಗಲೇ ಪ್ರಚಾರಕ್ಕೆ ಬರುವಂತೆ ರಜನಿಕಾಂತ್​ಗೆ ಪೋನ್​ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಬರೋದು ಓಕೆ ಆದ್ರೆ, ನಾಳೆ ಸುಮಲತಾ ನೇತೃತ್ವದ ಸಮಾವೇಶಕ್ಕೆ ಮತ್ತಷ್ಟು ರಂಗು ಬರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಅವರು ಬಂದ್ರೆ ಮಂಡ್ಯದಲ್ಲಿರುವ ತಮಿಳಿಗರ ವೋಟುಗಳು ಸುಮಲತಾಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ರಜನಿಕಾಂತ್ ಕರೆಸಲು ಚಿಂತನೆ ನಡೆದಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ತಮಿಳು ಮತಗಳು ಇವೆ.

Recommended For You

Leave a Reply

Your email address will not be published. Required fields are marked *