ಹೊಸ ಪಕ್ಷ ಕಟ್ಟುತ್ತಾರಾ ಸುಮಲತಾ ಅಂಬರೀಷ್..?

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕವೂ ಸುಮಲತಾ ಅಂಬರೀಷ್ ಸಕ್ರೀಯ ರಾಜಕಾರಣದಲ್ಲಿರಲು ನಿರ್ಧರಿಸಿದ್ದು, ಎಲೆಕ್ಷನ್‌ನಲ್ಲಿ ಸೋತರೂ, ಗೆದ್ದರೂ ಮಂಡ್ಯದಲ್ಲೇ ನೆಲೆಯೂರಬೇಕೆಂದು ಸುಮಲತಾ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಯಾವ ರಾಜಕೀಯ ಪಕ್ಷಕ್ಕೂ ಹೋಗದಿರಲು ಸುಮಲತಾ ನಿರ್ಧರಿಸಿದ್ದು, ಹೊಸ ಪಕ್ಷವನ್ನು ಕಟ್ಟಲು ಸುಮಲತಾ ಮಾಸ್ಟರ್ ಪ್ಲಾನ್ ಮಾಡಿದ್ದು, ಸ್ವಾಭಿಮಾನಿ ಪಕ್ಷದ ಹೆಸರಿನಲ್ಲಿ ಪಕ್ಷ ಕಟ್ಟೋಕೆ ಚಿಂತನೆ ನಡೆಸಲಾಗಿದೆ.

ಈಗಾಗಲೇ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾಗೆ, ಬಿಜೆಪಿ ಸಪೋರ್ಟ್ ಮಾಡಲು ನಿರ್ಧರಿಸಿದ್ದು, ಎಲೆಕ್ಷನ್ ನಂತರ ಸುಮಲತಾ ಬಿಜೆಪಿ ಸೇರುತ್ತಾರೆಂಬ ಗುಸು ಗುಸು ಶುರುವಾಗಿದೆ. ಈ ಕಾರಣಕ್ಕಾಗಿ ಬೇರೆ ಪಕ್ಷಕ್ಕೆ ಹೋದರೆ, ಜನರು ತಿರಸ್ಕರಿಸುತ್ತಾರೆಂದು ಸ್ವಾಭಿಮಾನಿ ಹೆಸರಿನ ಪಕ್ಷ ಕಟ್ಟೋಕ್ಕೆ ಸುಮಲತಾ ಚಿಂತನೆ ನಡೆಸಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಲು ಕಾರ್ಯತಂತ್ರ ನಡೆಸಿದ್ದು, ಮುಂದಿನ ಎಲ್ಲಾ ಚುನಾವಣೆ ಹೊಸಪಕ್ಷದಿಂದಲೇ ಎದುರಿಸಲು ಚಿಂತನೆ ನಡೆದಿದ್ದು, ನೂತನ ಪಕ್ಷದ ಬಗ್ಗೆ ರೂಪುರೇಷೆ ಕುರಿತು ಚರ್ಚೆ ನಡೆದಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.