ತಾಯಿ ಗಂಡ ಕೆಲಸ ಅಂದ್ರೆ ಏನು ಎಂದು ಸಿ.ಟಿ ರವಿ ಗೆ ಸಿದ್ದರಾಮಯ್ಯ ಪ್ರಶ್ನೆ

ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ, ಜನಾರ್ಧನ್ ರೆಡ್ಡಿ ಹೀಗೆ ಸಾಲು ಸಾಲು ಬಿಜೆಪಿ ನಾಯಕರು ಜೈಲಿಗೆ ಹೋಗಿಬಂದರು ಈಗ ನಾವು ಚೌಕಿದಾರ್ ಅಂತಾ ಹೇಳ್ತಾ ಇದ್ದಾರೆ ಹಾಗಾದರೆ ನಾವು ಏನು ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕಮಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು,  ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರ್ ಗಳಾದರೆ ನಾವು ಏನು ಆಗಬೇಕು ಎಂದು ಸಿದ್ದರಾಮಯ್ಯ ಈ ವೇಳೆ ಬಿಜೆಪಿ ಮುಖಂಡರಿಗೆ ಪ್ರಶ್ನೆ ಮಾಡಿದರು.

ಇನ್ನೂ ಇದೇ ವೇಳೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೇ ನೀಡಿದ ಅವರು, ಯಡಿಯೂರಪ್ಪ, ಶೋಭಾ, ಸಿ.ಟಿ.ರವಿ ಮನೆಮೇಲೆ ಯಾಕೆ ರೈಡ್ ಮಾಡಿಲ್ಲ ಇವರೆಲ್ಲಾ ಸತ್ಯಹರಿಶ್ಚಂದ್ರರಾ ಹಾಗಾದ್ರೆ ನಿಮಗೆ ಜಿಡಿಎಸ್ ಹಾಗೂ ಕಾಂಗ್ರೆಸ್ ಯವರೇ ಕಾಣೋದಾ ದಾಳಿ ಮಾಡೋಕೆ.  ಚುನಾವಣೆ ಮುಗಿದ ಮೇಲೆ ದಾಳಿ ಮಾಡಿ, ನಾವು ಕಾನೂನಿಗೆ ಬೆಲೆ ಕೊಡ್ತಿವಿ ಆದರೆ ಕಾನೂನು ಯಾರು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕಿಡಿಕಾರಿದರು.

ಇನ್ನೂ ಬಿಜೆಪಿಗೆ ಮತ ಹಾಕದೇ ಇದ್ದರೆ ಅದು ತಾಯಿಗಂಡ ಕೆಲಸ ವಿಚಾರ ಎಂದು ಸಿ ಟಿ ರವಿ ಹೇಳಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೇ ನೀಡಿದ ಅವರು ಇದು ಸಿ.ಟಿ ರವಿಯ ಸಂಸ್ಕೃತಿ ತೋರುತ್ತೆ, ತಾಯಿ ಗಂಡ ಕೆಲಸ ಎಂದರೇ ಏನು ಅಂತಾ ಸಿ.ಟಿ ರವಿ ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಅವನು ಏನಾದರು ಹಾಗೇ ಆಗಿರಬೇಕು, ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕೇರಳದಲ್ಲಿ ರಾಹುಲ್ ಗಾಂಧಿ ಕುಂಕಮ ಇಟ್ಟುಕೊಂಡು ಪ್ರಚಾರ ಮಾಡುತ್ತಾರೆ ಎಂದು ರವಿ ಹೇಳಿದ ಮಾತಿಗೆ ಕುಂಕುಮ ಇಟ್ಕೊಂಡು ಒಂಥರಾ ರಾಹುಲ್ ಅರಕೆ ಕುರಿ ಥರಾ ಕಾಣ್ತಾ ಇದ್ರು,  ಉದ್ದನಾಮ ಇಡೋರನ್ನು ಕಂಡ್ರೆ ನಮಗೆ ಭಯ ಅಂತಾ ನಾನು ಹೇಳಿದ್ದು, ರವಿ ಇಟ್ಟುಕೊಳ್ಳುತ್ತಾನಲ್ಲ ಆ ರೀತಿ ನಾಮ ಹಾಕೋರು ನನಗೆ ರಾಕ್ಷಸರ ಹಾಗೇ ಕಾಣ್ತಾರೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ  ಸಿ.ಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Recommended For You

Leave a Reply

Your email address will not be published. Required fields are marked *