ಇನ್ಸ್​​​ಪೆಕ್ಟರ್ ನೀಡಿದ್ದ ನೋಟಿಸ್​​ಗೆ ಪೇದೆಯಿಂದ ಪವರ್ ಫುಲ್ ಟಾಂಗ್..!

ಬೆಂಗಳೂರು: ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೊಲೀಸ್ ಪೇದೆಗೆ ನೊಟೀಸ್ ನೀಡಿದ ಪ್ರಕರಣ ಸಂಬಂಧಿದಂತೆ ಜಯನಗರ ಪೊಲೀಸ್ ಇನ್ಸ್​ಪೆಕ್ಟರ್​​ಗೆ ಪೇದೆ ತಿರುಗಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.

ಪೊಲೀಸ್​​ ಪೇದೆ ಇನ್ಸ್​​ಪೆಕ್ಟರ್ ನೊಟೀಸ್​​ಗೆ ಉತ್ತರಿಸಿದ ಅವರು, “ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥ್ವಾ ಯುಡಿ ಹೊಟೇಲ್ ನಲ್ಲಿ ಟಿಫನ್ ” ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್​​​ನಲ್ಲಿ ಊಟ, ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30ಕ್ಕೆ ಅಲ್ಲ, 8.00ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದೆ ಎಂದಿದ್ದಾರೆ.

ಆದರೆ, ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು-ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಪೊಲೀಸ್​ ಪೇದೆ  ಉತ್ತರಿಸಿದ್ದಾರೆ.

[youtube https://www.youtube.com/watch?v=HuLyI4t-SbQ]

ಇನ್ಸ್​​ಪೆಕ್ಟರ್ ಕೊಟ್ಟ ನೊಟೀಸ್​​ಗೆ ಉತ್ತರ ನೀಡಿರುವ ಪೇದೆ, ಪ್ರತಿದಿನ ಬೀಟ್ ಸಿಬ್ಬಂದಿಗಳು ತಡವಾಗಿ ಬರುತ್ತಿದ್ದರು. ಹೀಗಾಗಿ ಪೇದೆ ಸೇರಿ 5 ಮಂದಿಗೆ ಜಯನಗರ ಠಾಣೆ ಇನ್ಸ್ ಪೆಕ್ಟರ್ ನೊಟೀಸ್ ನೀಡಲಾಗಿತ್ತು.

Recommended For You

Leave a Reply

Your email address will not be published. Required fields are marked *