ಅಧಿಕಾರಿಗಳಿಗೆ ಏನು ಸಿಕ್ಕಿಲ್ಲ, ಸಿಕ್ಕಿದ್ರೆ ಹಿಂಡಿ, ಬೂಸಾ ಹಾಗೂ ಗೊಬ್ಬರ ಸಿಕ್ಕಿರಬಹುದು- ನಟ ದರ್ಶನ್

ಮಂಡ್ಯ: ಸ್ಯಾಂಡಲ್​​ವುಡ್​ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಫಾರ್ಮ್ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿಲ್ಲ, ಬರೀ ಚುನಾವಣೆ ಅಧಿಕಾರಿಗಳು ಬಂದು ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂಡದ ಪಾಂಡವಪುರದ ಚಿಕ್ಕಾಡೆ ಗ್ರಾಮದಲ್ಲಿಂದು ಪ್ರಚಾರದ ವೇಳೆ ಸುದ್ದಿಗಾರೊಟ್ಟಿಗೆ ಮಾತನಾಡಿದ ಅವರು,  ಅಲ್ಲ್ಲೆಲ್ಲೋ ಪಕ್ಕದಲ್ಲಿ ದುಂಡು ಹಂಚುತ್ತಿದ್ರಂತೆ ಅದಕ್ಕೆ ಬಂದು ಹೋಗಿದ್ದಾರೆ. ನಮ್ಮ ಮನೆಯಲ್ಲಿ ಚುನಾವಣೆ ಅಧಿಕಾರಿಗಳಿಗೆ ಏನು ಸಿಕ್ಕಿಲ್ಲ, ಸಿಕ್ಕಿದ್ರೆ ಹಸುವಿಗೆ ಹಾಕುವ ಹಿಂಡಿ, ಬೂಸಾ ಹಾಗೆ ಹಸುವಿನ ಗೊಬ್ಬರ, ಪ್ರಾಣಿ ಪಕ್ಷಿಗಳ ಗೊಬ್ಬರ ಸಿಕ್ಕಿರಬಹುದು ಎಂದು ತಿಳಿಸಿದರು.

ಇನ್ನು ಸಂದೇಶ್ ಹೋಟೆಲ್ ಮೇಲೆ ದಾಳಿ ಆಗಬಹುದು ಯಾಕಂದ್ರೆ ನಾವು ಅಲ್ಲೆ ಇದ್ದೀವಲ್ಲ ಅದಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಲಿ ನನಗೆ ಭಯವಿಲ್ಲ, ನಾನು ದಾಳಿ ಎದುರಿಸಲು ಸಮರ್ಥನಿದ್ದೇನೆ ಎಂದು ನಟ ದರ್ಶನ್ ಐಟಿ ದಾಳಿ ಬಗ್ಗೆ ಮಾತನಾಡಿದರು.

ಇಂದು ನಟ ದರ್ಶನ್ ಮನೆ ಮೇಲೆ ಐಟಿದಾಳಿ ನಡೆದಿದೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು ಇದರ ಬೆನ್ನಲೆ ಅವರು ಮಾಧ್ಯಮಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

Recommended For You

Leave a Reply

Your email address will not be published. Required fields are marked *