ನಾನು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನಿಡುತ್ತೇನೆ: ನಿಖಿಲ್ ಬಗ್ಗೆ ರೇವಣ್ಣ ಮಾತು

ಹಾಸನ: ಸಚಿವ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದು, ನಾನು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡುತ್ತೇನೆ. ಕೆಲವರು ಪಕ್ಷದಲ್ಲೇ ಇದ್ದು , ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆ.ರಾಜ್ಯದ ಬಗ್ಗೆ 24 ಗಂಟೆ ಜನರ ಬಗ್ಗೆ ಯೋಚಿಸೋ ಮುಖ್ಯಮಂತ್ರಿ ಇದ್ದರೆ ಅದು ಸಿಎಂ ಕುಮಾರಸ್ವಾಮಿ ಎಂದು ಹೇಳಿದ್ದಾರೆ.

ನನ್ನ ಮಗನಿಗೆ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ದಿನಾ ಒಂದು ನೋಟೀಸ್ ನೀಡ್ತಾರೆ. ಜಿಲ್ಲಾಧಿಕಾರಿಗಳು ಬಿಜೆಪಿ ಪರ ಇರುವಂತೆ ಕೆಲಸ ಮಾಡಬಾರದು. ಈಶ್ವರಪ್ಪ ಕುಮಾರಸ್ವಾಮಿ ಬಗ್ಗೆ ಸಾವಿನ ಮಾತು ಮಾತಾಡಿದ್ರು. ಚುನಾವಣಾ ಆಯೋಗ ಸುಮೋಟೋ ಕೇಸ್ ದಾಖಲಿಸಬೇಕಿತ್ತು . ಯಾಕೆ ಸುಮ್ಮನಿದ್ದಾರೆ. ಈಶ್ವರಪ್ಪಗೆ ನಾಚಿಕೆ ಆಗಬೇಕು. ಈಶ್ವರಪ್ಪನ ಇಂಥ ಹೇಳಿಕೆಗಳನ್ನು ನೋಡಿಕೊಂಡು ಸುಮ್ಮನಿದ್ದಾರೆ ಎಂದು ಸಚಿವ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ, ನಾನು ನಮ್ಮಪ್ಪ ಪರ್ಸೆಂಟೇಜ್ ಲೆಕ್ಕಕ್ಕೆ ಕೈ ಹಾಕಿಲ್ಲ. ಆ ಕೆಲಸಗಳನ್ನ ಜಗದೀಶ್ ಶೆಟ್ಟರ್ ಮಾಡಿದ್ದಾರೆ. ಈಶ್ವರ ದೇವಾಲಯ ಮೇಲೆ ಅರ್ಚಕರ ಮನೆ ಮೇಲೆ ದಾಳಿ ಮಾಡಿದ್ದು ಐಟಿ ಅಧಿಕಾರಿಗಳೇ. ಅವರಿಗೆ ಸಿಕ್ಕಿರೋದು ಆತನ ಪರ್ಸಲ್ಲಿ ಹತ್ತು ರೂ. ಮಾತ್ರ. ಈ ರಾಜಕಾರಣ ಬಹಳದಿನ ನಡೆಯಲ್ಲ. ಶಿವನೆಂಬ ದೇವರಿದ್ದಾನೆ ಎಂದು ಹೇಳಿದ್ದಾರೆ.

ಹಾಸನ ರಿಂಗ್ ರೋಡ್‌ಗೆ ಐವತ್ತು ಕೋಟಿ ನೀಡಿದ್ರೆ ಹಾಸನ ಬಜೆಟ್ ಅಂತ ವ್ಯಂಗ್ಯ ಮಾಡ್ತಾರೆ. ಹಾಸನ ಬಿಜೆಪಿ ಶಾಸಕನಿಗೆ ನಾಚಿಕೆ ಆಗ್ಬೇಕು. ಈ ರಾಷ್ಟ್ರ ,ರಾಜ್ಯ ಉಳಿಬೇಕಾದ್ರೆ ಬಿಜೆಪಿ ತೊಲಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

Recommended For You

Leave a Reply

Your email address will not be published. Required fields are marked *