‘ಅವನಿಗೆ ಮಾನ ಮರ್ಯಾದೆ ಇದ್ರೆ ಯಡಿಯೂರಪ್ಪರ ಕಾಲಿಗೆ ಬೀಳಲಿ’

ಹಾಸನ: ಹಾಸನದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿದ್ದು, ಅಧಿಕಾರ ಇದ್ದಾಗ ಹಾಸನ ಜಿಲ್ಲೆಗೆ ಬಿಜೆಪಿ ಕೊಡುಗೆ ಏನು?.. ಸಮ್ಮಿಶ್ರ ಸರಕಾರ ಹಾಸನಕ್ಕೆ ಹಲವು ಯೋಜನೆ ಕೊಟ್ರೆ, ಇದು ಹಾಸನ ಬಜೆಟ್ ಅಂತಾರೆ, ಆದರೂ ಯಾವ ಮುಖ ಹೊತ್ತು ಮತ ಕೇಳುತ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೇ, ದೇವೇಗೌಡರು, ಹಾಸನ ಜಿಲ್ಲೆಗೆ ಅವರದೇ ಕೊಡುಗೆ ನೀಡಿದ್ದಾರೆ. ಹೀಗಾಗಿ 8 ವಿಧಾನಸಭಾ ಕ್ಷೇತ್ರಗಳ ಜನರು ಪ್ರಜ್ವಲ್ ಗೆಲ್ಲಿಸೋ ತೀರ್ಮಾನ ಮಾಡಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ.

ನಿಂಬೆಹಣ್ಣು ಸಹಿತ ರೇವಣ್ಣನನ್ನೇ ನುಂಗುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ರೇವಣ್ಣ, ಈಶ್ವರಪ್ಪನಂಥವರನ್ನು ನಮ್ಮೂರಿನ ಶಿವನೇ ನುಂಗುತ್ತಾನೆ. ಈಶ್ವರಪ್ಪ ಅವನು ಏನು ಅಂತ ಎಲ್ಲರಿಗೂ ಗೊತ್ತಿದೆ ಎಂದು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.

ಅಲ್ಲದೇ, ಅವನು ಒಂದು ರೀತಿ ಬುಡುಬುಡುಕೆ ಇದ್ದ ಹಾಗೆ. ರಾಜ್ಯದಲ್ಲಿ ಯಾರೂ ಈಶ್ಚರಪ್ಪನ ಹೆಸರು ಹೇಳ್ತಾರಾ ..? ಅವನಿಗೆ ಮಾನ ಮಾರ್ಯಾದೆ ಇದ್ರೆ ಯಡಿಯೂರಪ್ಪ ಕಾಲಿಗೆ ಬೀಳಲಿ, ಇಂಥ ಈಶ್ವರಪ್ಪನಂಥವರನ್ನು ನಾನೂ ಎಷ್ಟೋ ಜನ ನೋಡಿದ್ದೇನೆ ಎಂದು ಕಿಡಿಕಾರಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.