‘ಕುಮಾರಸ್ವಾಮಿ ತಂದೆಯನ್ನೇ ಒದ್ದುಆಚೆ ಹಾಕಿದ್ರು’ – ಶಾಸಕ ಮಾಧುಸ್ವಾಮಿ

ತುಮಕೂರು:  ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕಲ್ಲಲ್ಲಿ ಹೊಡೆದರು, ನಾನು ಎದೆಕೊಟ್ಟೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಪ್ರಚಾರದ ಸಭೆ ಹೇಳಿದರು.

ತುಮಕೂರಲ್ಲಿಂದು ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕಲ್ಲಲ್ಲಿ ಹೊಡೆದರು, ನಾನು ಎದೆಕೊಟ್ಟೆ ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು ಎಂದರು.

ಅಷ್ಟೇ ಅಲ್ಲದೇ ನನ್ನ ಮಕ್ಕಳಾದ್ರೂ ಈ ರೀತಿ ಏಟ್ಟು ತಿನ್ನುತ್ತಿರಲ್ಲಿಲ್ಲ ಅಂತ ಹೇಳಿದ್ರು ಅಂತ ಕುಮಾರಸ್ವಾಮಿ ದೇವೇಗೌಡರನ್ನು ಒದ್ದು ಆಚೆಗೆ ಹಾಕಿದ್ದರು. ಕುಮಾರಪಾರ್ಕ್ ನ ಸಣ್ಣ ಕ್ವಾಟರ್ಸ್ನಲ್ಲಿ ವಾಸ ಮಾಡುತ್ತಿದ್ದರು ದೇವೇಗೌಡರು ಎಂದು ತಿಳಿಸಿದರು.

ಉಗ್ರಪ್ಪ, ದೇವೇಗೌಡರು ಬೆನ್ನುಜ್ಜುತ್ತಿದ್ದರು. ಕುಮಾರಸ್ವಾಮಿ ಅವರನ್ನು ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಈಗ ಬರಲಿ ಕುಮಾರಸ್ವಾಮಿ ನನ್ನ ಬಳಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಅಂತ ಹೇಳ್ತೀನಿ ಎಂದು ನುಡಿದರು.

ಇನ್ನು ಟಿಫ್ಪನ್ ಕ್ಯಾರಿಯರ್ ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು, ನಾವು ಮಕ್ಕಳಲ್ಲ. ಬೆನ್ನು ತಿಕ್ಕಿದ್ದ ಉಗ್ರಪ್ಪ, ಮಾನಸ ಪುತ್ರ ಬಿ.ಎಲ್ ಶಂಕರ್ ಯಾಕೆ ಆಚೆ ಹೋದರು. ವೈ.ಕೆ ರಾಮಯ್ಯ ಯಾಕೆ ಕಾಂಗ್ರೆಸ್ ಗೆ ಹೋದ್ರು ಎಂದು ಶಾಸಕ ಮಾಧುಸ್ವಾಮಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

 

 

Recommended For You

Leave a Reply

Your email address will not be published. Required fields are marked *