ಯಾವನೋ ಅವನು ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ : ಕುಮಾರಸ್ವಾಮಿ ಕಿಡಿ

ಯಾವನೊ ಅವನು ರಾಕಿಂಗ್ ಸ್ಟಾರ್ ಯಶ್ ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ. ಅವರಿಗೆ ಇನ್ನು ಗೊತ್ತಿಲ್ಲ. ನನ್ನ ಕಾರ್ಯಕರ್ತರು ಸುಮ್ಮನಿರೋದು ನನ್ನ ಬಗ್ಗೆ ತಪ್ಪು ಸಂದೇಶ ಹೊಗುತ್ತೆ ಅಂತ ಎಂದು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕೆ.ಆರ್.ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಅವರು,  ನಾನು ನಿರ್ಮಾಪಕ ಆಗಿದ್ದವನು. ನನ್ನಂಥ ನಿರ್ಮಾಪಕ ಇಲ್ಲದಿದ್ದಾರೆ ಎಲ್ಲಿ ಬದುಕ್ತಾವೆ ಇವು, ಸಿನೆಮಾದಲ್ಲಿ ನೋಡೋದು ನಿಜ ಅನ್ಕೋಬೇಡಿ. ನಿಮ್ಮ ಮನೆಯಲ್ಲಿ ನಡೆಯುವುದು ನಿಜವಾದ ಜೀವನ ಎಂದು ಯಶ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ ನಾನು, ಆಗಲೆ ಎಂಪಿ ಆಗಿದ್ದೇನೆ ಅಂತ ಮೂರು ತಿಂಗಳಿಂದ ನಿಮ್ಮ ತಲೆಗೆ ತುಂಬಿದ್ದಾರೆ.  ನಾನು ಮಾಧ್ಯಮಗಳಿಂದ ಬದುಕಿಲ್ಲ,  ಮಾಧ್ಯಮದವರು ಅವರು ಏನ್ ಬೇಕಾದರು ಮಾಡಿಕೊಳ್ಳಿ. ನಾನು ಇದು ಇರುವುದು ನಿಮ್ಮಿಂದ ಎಂದು  ಮತ್ತೆ ಮಾಧ್ಯಮದ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.

ನಾನು ಕಲಾವಿದರು ಅಂತ ಗೌರವ ಕೊಟ್ಟಿದಕ್ಕೆ ಹಳ್ಳಿ ಹಳ್ಳಿಯಲ್ಲ ಹೋಗಿ ನಮ್ಮ ಬಗ್ಗೆ  ಮಾತಾಡ್ತಾರೆ ಎಂದು ಇದೇ ವೇಳೆ ಆಕ್ರೋಶ ಹೊರಹಾಕಿದರು.

Recommended For You

Leave a Reply

Your email address will not be published. Required fields are marked *