ಏನು ಇವರೊಬ್ಬರೇ ಯುದ್ಧ ಮಾಡಿದ ಗಂಡಸಾ..? – ಹೆಚ್.ಡಿ.ದೇವೇಗೌಡ

ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಚಿಕ್ಕಮಗಳೂರಿಗೆ ಭೇಟಿ ನೀಡಿ, ಪ್ರಚಾರ ನಡೆಸಿದ್ದು, ದೇವೇಗೌಡರಿಗೂ ಮೋದಿ ಘೋಷಣೆಯ ಬಿಸಿ ತಟ್ಟಿದೆ.

ಕಾಲೇಜು ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದು, ಮೋದಿ ವಿರುದ್ಧ ದೇವೇಗೌಡರು ಹರಿಹಾಯ್ದಿದ್ದಾರೆ.
ಈಗಿನ ಯುವಕರು ಮೋದಿ-ಮೋದಿ ಅಂತಿದ್ದಾರೆ. ನಾನು ನೋಡದ ಮೋದಿನಾ. ನಾನು ಪಾರ್ಲಿಮೆಂಟ್ ಹೋಗೋದು ಸತ್ಯ.

ಮೋದಿ ಎದುರಿಸುವ ಕಿಚ್ಚು ಈ ರೈತನ ಮಗನಿಗೆ ಇದೆ. ಸ್ವರ್ಗವನ್ನ ಈ ದೇಶಕ್ಕೆ ತರುತ್ತೇನೆ ಎಂದ ಮನುಷ್ಯ ರೈತರಿಗೆ ಏನು ಮಾಡಿದ್ದಾರೆ..? ಮೋದಿ ಸೈನಿಕರಿಗೆ ಶೂ, ಬಟ್ಟೆ ಜಾಕೇಟ್ ಇರಲ್ಲಿಲ್ಲ ನಾವು ಕೊಟ್ಟೆವು ಅಂತಿದ್ದಾರೆ. ವಾಜಪೇಯಿ ಇದ್ದಾಗ ಕಾರ್ಗಿಲ್ ಯುದ್ದ ಮಾಡುವಾಗ ನಮ್ಮ ಸೈನಿಕರಿಗೆ ಏನು ಇರಲಿಲ್ವಾ..? ಸೈನಿಕರಿಗೆ ನಾವೇ ಎಲ್ಲವನ್ನು ನೀಡಿದ್ದೇವೆ ಎನ್ನುವವರಿಗೆ ನಾಚಿಕೆ ಆಗ್ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಯುವಕರು ಸೋಶಿಯಲ್ ಮೀಡಿಯಾಗಳ ಹಿಂದೆ ಬಿದ್ದು ಮೋಸ ಹೋಗಬಾರದು. ನಾವೇ ಯುದ್ದ ಮಾಡಿದ್ದು ಅಂತಾ ಮೀಡಿಯಾ ಇಟ್ಕೊಂಡು ಬೊಬ್ಬೆ ಹೊಡೆಯುತ್ತಾ ಇದ್ದಾರೆ. ಏನು ಇವರೊಬ್ಬರೇ ಯುದ್ಧ ಮಾಡಿದ ಗಂಡಸಾ ಎಂದು ಮೋದಿಗೆ ದೇವೇಗೌಡರು ಪ್ರಶ್ನೆ ಮಾಡಿದ್ದಾರೆ..? ಹಿಂದೆ ಕಾಂಗ್ರೆಸ್ ಬೇರೆ ಪಕ್ಷಗಳು ಇದ್ದಾಗಲೂ ದೇಶದಲ್ಲಿ ಯುದ್ದ ನಡೆದಿದೆ. ಈ ದೇಶ ಆಳುವ ಶಕ್ತಿ ನಮಗೆ ಅಥವಾ ಸಿದ್ದರಾಮಯ್ಯ ಅಂತಾ ನಾಯಕರಿಗೆ ಇಲ್ವಾ..? ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

Recommended For You

Leave a Reply

Your email address will not be published. Required fields are marked *